ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿಯೇ ಹಲ್ ಚಲ್ ಎಬ್ಬಿಸಿದೆ. ಲಾಯರ್ ಜಗದೀಶ್ ಅಂತೂ ಮಿಕ್ಕ ಸ್ಪರ್ಧಿಗಳ ನಿದ್ದೆಯನ್ನೇ ಕಸಿದಿದ್ದಾರೆ. ವಕೀಲ್ ಸಾಹೇಬ್ರ ದವಲತ್ತು, ಏಕವಚನದಲ್ಲಿ ಮಾತಾಡಿಸುವ ಚಾಳಿ, ಟಾಸ್ಕ್‌ನಲ್ಲಿ ಹೇಳಿದ ಮಾತು ಕೇಳದೆ ಮನೆಯೊಳಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ.
ಜಗದೀಶಪ್ಪನ ಆಕ್ರೋಶ ಆರ್ಭಟ ಸ್ವತಃ ಬಿಗ್ ಬಾಸ್ ವಿರುದ್ಧವೇ ಕೇಳಿಬಂದಿದೆ. ಈ ಬೆಳವಣಿಗೆ ಬಳಿಕ ಸ್ವತ: ಬಿಗ್‌ಬಾಸ್ ಸಂಕಷ್ಟಕ್ಕೆ ಸಿಲುಕಿದೆ. ಮನೆಯಿಂದ ಹೊರಗೆ ಕಳುಹಿಸಿದರೂ ಸಮಸ್ಯೆ. ಒಳಗೆ ಇಟ್ಟುಕೊಂಡರೂ ಸಮಸ್ಯೆ. ಲಾಯರ್ ಜಗದೀಶ್ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತೆ? ಮುಂದಿನ ನಿರ್ಧಾರವೇನು? ಮನೆಯೊಳಗೆ ಇಟ್ಟುಕೊಳ್ಳುತ್ತಾ, ಆಚೆ ಕಳಿಸುತ್ತಾ? ಅನ್ನೋ ಗೊಂದಲ ಶುರುವಾಗಿದೆ.
ಇಂದಿನ ಜಗದೀಶ್ ಪ್ರೋಮೊ ಅಂತೂ ಕುತೂಹಲ ಕೆರಳಿಸಿದೆ. ಅದರಲ್ಲಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗುವುದಕ್ಕೆ ವಕೀಲ್ ಸಾಬ್ ರೆಡಿಯಾಗಿ ನಿಂತಿದ್ದಾರೆ. ಹೊರ ಬಂದ್ಮೇಲೆ ಬಿಗ್‌ಬಾಸ್ ಅನ್ನೂ ಎಕ್ಸ್‌ಪೋಸ್ ಮಾಡುತ್ತೇನೆ, ಸರ್ವನಾಶ ಮಾಡುತ್ತೇನೆ ಎಂದು ಕ್ಯಾಮರಾ ಮುಂದೆ ಹೇಳಿದ್ದಾರೆ. ಈಗ ಬಿಗ್‌ಬಾಸ್‌ಗೆ ಈ ಸ್ಪರ್ಧಿ ತೆಲೆ ನೋವು ಆದಂತೆ ಇದೆ. ಮನೆಯೊಳಗೆ ಇಟ್ಟುಕೊಂಡರೂ ತಲೆ ನೋವು. ಹೊರಗೆ ಬಿಟ್ಟರೂ ತಲೆನೋವು. ಹೀಗಾಗಿ ಬಿಗ್‌ಬಾಸ್ ಮುಂದಿನ ನಿರ್ಧಾರವೇನು? ಅನ್ನೋದು ಕುತೂಹಲ ಕೆರಳಿಸುತ್ತಿದೆ.
ಹೊರಗಡೆ ಘಟಾನುಘಟಿ ರಾಜಕಿಯ ನಾಯಕರ ವಿರುದ್ಧ ತೊಡೆತಟ್ಟಿದ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಹೊಸಕಿಹಾಕಿ ಬಿಟ್ಟಿದ್ದಾರೆ. ಉಗ್ರಂ ಮಂಜು ಗಮನ ಸೆಳೆಯುವುದಕ್ಕೆ ಪ್ರಯತ್ನ ಪಟ್ಟರೂ ಜಗದೀಶ್ ಆರ್ಭಟದ ಮುಂದೆ ಮಂಕಾದಂತೆ ಕಾಣುತ್ತಿದೆ. ಇನ್ನೂ ಸ್ವರ್ಗವಾಸಿಗಳ ಕಡೆ ಬಹುತೇಕ ಎಲ್ಲರೂ ಸೈಲೆಂಟ್.
ಲಾಯರ್ ಜಗದೀಶ್ ಅನ್ನು ಹೀಗೆ ಬಿಟ್ಟರೆ ಬಿಗ್‌ಬಾಸ್ ಕನ್ನಡ 11 ಒನ್ ಮ್ಯಾನ್ ಶೋ ಆಗುತ್ತೆ. ಅದೇ ಕಂಟ್ರೋಲ್ ಮಾಡುವುದಕ್ಕೆ ಹೋದರೆ, ವಕೀಲ್ ಸಾಭ್ ಉಲ್ಟಾ ಹೊಡೆಯುತ್ತಾರೆ. ಸದ್ಯದ ಲಾಯರ್ ಜಗದೀಶ್ ಅವರನ್ನು ಮನೆಯೊಳಗೆ ಇಟ್ಟುಕೊಳ್ಳುವುದು ಒಳ್ಳೆಯದು ಅನ್ನೋ ಸಲಹೆ ಕೇಳಿ ಬರುತ್ತಿದೆ. ಆರಂಭದಲ್ಲಿ ಎಗರಾಡುತ್ತಿದ್ದ ಲಾಯರ್ ಜಗದೀಶ್ ಮುಂದಿನ ದಿನಗಳಲ್ಲಿ ಕಂಟ್ರೋಲ್‌ಗೆ ಬರಬಹುದು. ಹೊರಗಿನ ಪ್ರಪಂಚ ಬಿಟ್ಟು ಕೆಲವು ದಿನಗಳ ಒಳಗೆ ಇದ್ಮೇಲೆ ತಾಳ್ಮೆ ತಾನಾಗೆ ಬರಬಹುದು ಅನ್ನೋ ಸಲಹೆ ಕೂಡ ಕೇಳಿ ಬರುತ್ತಿದೆ.