ಲಡ್ಡು ಅವಾಂತರದ ನಂತರ ತಿರುಪತಿ ಊಟದಲ್ಲಿ ಸಹಸ್ರಪದಿ ಪತ್ತೆ: ಭಕ್ತನ ಆರೋಪ ನಿರಾಕರಿಸಿದ ದೇಗುಲ
ತಿರುಪತಿ ದೇಗುಲದ ಲಡ್ಡಿನಲ್ಲಿ ದನದ ಕೊಬ್ಬಿನಾಂಶ ಇರುವ ವಿಚಾರ ದೇಶದ್ಯಾಂತ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬೆನ್ನಲ್ಲೇ ಈಗ ತಿರುಪತಿಯಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ.ತಿರುಪತಿ ದೇಗುಲದ ಲಡ್ಡಿನಲ್ಲಿ ದನದ ಕೊಬ್ಬಿನಾಂಶ ಇರುವ ವಿಚಾರ ದೇಶದ್ಯಾಂತ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬೆನ್ನಲ್ಲೇ ಈಗ ತಿರುಪತಿಯಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ತಿರುಪತಿ ದೇಗುಲ ಮಂಡಳಿ ನಿರಾಕರಿಸಿದೆ. ಇದೊಂದು ಆಧಾರರಹಿತವಾದ ಆರೋಪ ಎಂದು ದೇಗುಲ ಮಂಡಳಿ ಹೇಳಿದೆ.
ಈ ಘಟನೆ ಬುಧವಾರ ನಡೆದಿದೆ, ಹೆಸರು ಹೇಳಲು ಇಚ್ಚಿಸದ ಭಕ್ತರೊಬ್ಬರು ತನಗೆ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ದೂರಿದ್ದಾರೆ. ಈ ರೀತಿಯ ಅವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಗದು, ಇದು ಟಟಿಡಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.