ಚಿನ್ನ ಚಿನ್ನ ಆಸೆ… ಚಿನ್ನದಂತಹ ಮಾತು… ಮೌನ ಬಂಗಾರ…. ಬಂಗಾರದ ಮನುಷ್ಯ… ಬಾಳು ಬಂಗಾರವಾಗಲಿ ಏನಪ್ಪಾ ಬರೀ ಚಿನ್ನ ಚಿನ್ನ ದ ವಿಷಯ ಅಂದುಕೊಂಡಿರಾ.. ಹೌದು ಇದು ಚಿನ್ನದ ವಿಷ್ಯಾನೇ..
The history of the world is history of the gold ಎಂಬ ಮಾತಿದೆ. ಮನುಷ್ಯನ ಉಗಮದಷ್ಟೇ ಹಿಂದಿನ ಇತಿಹಾಸವನ್ನು ಚಿನ್ನವು ಹೊಂದಿದೆ.
ಪಾಸ್ಟ್ ಪ್ರೆಸೆಂಟ್ ಮತ್ತು ಫ್ಯೂಚರ್ ನಲ್ಲಿ ಯಾವ ಗಳಿಗೆಯಲ್ಲೂ ತನ್ನ ಬೆಲೆ ಕಳೆದುಕೊಳ್ಳದ ಏಕೈಕ ಹಳದಿ ಲೋಹ. ಮದುವೆಯಲ್ಲಿ ಹುಡುಗಿಗೆ ಎಷ್ಟು ಚಿನ್ನ ಹಾಕಿದ್ರು ಅಂತ ಭಾರತೀಯರ ಮನೆಯಲ್ಲಿ ಮಾತನಾಡುವುದು ವಾಡಿಕೆ. ಆ ಮನೆಯಲ್ಲಿ ಅಷ್ಟೊಂದು ಚಿನ್ನವಿತ್ತಂತೆ ಎಂದು ಹೇಳಿ ಒಬ್ಬರ ಶ್ರೀಮಂತಿಕೆಯನ್ನು ತೂಗುವುದು ಪದ್ಧತಿ. ಲೋಕಾಯುಕ್ತ ದಾಳಿ ಮಾಡಿದಾಗ ಇಷ್ಟೊಂದು ಕೆಜಿ ಚಿನ್ನ ಸಿಕ್ಕಿತಂತೆ ಎಂಬುದು ದೊಡ್ಡ ಸುದ್ದಿ. ಬೀದಿ ಕೊನೆಯ ಮನೆಯಲ್ಲಿ ದರೋಡೆಯಾದಾಗ ಒಂದಿಷ್ಟು ಚಿನ್ನವು ಕಳವಾಯಿತಂತೆ ಎಂದು ಮಾತಿಗಿಳಿಯುವುದು.
ರಾಜರ ಇತಿಹಾಸ ಓದುವಾಗ ಚಿನ್ನದ ಗೋಪುರವಿದ್ದಂತೆ ದೇವರ ವಿಗ್ರಹವಿದ್ದಂತೆ ರಥವಿತ್ತಂತೆ ಧ್ವಜ ಸ್ತಂಭವಿತ್ತಂತೆ ಎಂಬ ಲೆಕ್ಕ ಕೊಡುವುದು. ಎಲ್ಲಾ ಮಾತುಕತೆಯಲ್ಲೂ ಚಿನ್ನವೇ ಹೈಲೈಟ್ ಮತ್ತು ನಮ್ಮ ಆರ್ಥಿಕ ಸ್ಥಿತಿಯನ್ನು ತೋರಿಸುವ ಮೈನ್ asset ಅಂದ್ರೆ ಚಿನ್ನನೇ. ಹೆಂಡತಿಯನ್ನು ಚಿನ್ನ ಅಂತ ಕರೆದಾಗ ಸ್ವಲ್ಪ ದಿನದ ಖುಷಿ ಇರಬಹುದಷ್ಟೇ ಆದರೆ ಆಭರಣದ ಚಿನ್ನ ಕೊಡಿಸಿದಾಗ ಆಗುವ ಖುಷಿಯ ಮುಂದೆ ಕರೆಯುವ ಚಿನ್ನ ಏನೇನೋ ಆಗಿರುವುದಿಲ್ಲ. ಚಿನ್ನವೆಂದರೆ ಪ್ರೀತಿ ಚಿನ್ನವೆಂದರೆ ಐಶ್ವರ್ಯ ಚಿನ್ನವೆಂದರೆ ಸಂಪತ್ತು, ಚಿನ್ನವೆಂದರೆ ಸಂಭ್ರಮ ಎಲ್ಲಕ್ಕಿಂತ ಮಿಗಿಲು ಚಿನ್ನವೆಂದರೆ ಮೋಹ.
ಮನುಷ್ಯ ಚಿನ್ನದ ಈ ಮೋಹ ಪಾಶಕ್ಕೆ ಬಿದ್ದು ಸುಮಾರು 6000 ವರ್ಷವಾಯಿತಂತೆ. ಚಿನ್ನಕ್ಕೆ ಸರಿಸಾಟಿ ಯಾವುದು ಇಲ್ಲ ಹಾಗಂತ ಚಿನ್ನಕ್ಕಿಂತ ಮಿಗಿಲಾದ ಅಥವಾ ಅಪರೂಪದ ಲೋಹ ಬೇರೊಂದಿಲ್ಲವೆಂದಲ್ಲ. ಆದರೂ ಈ ಹಳದಿ ಲೋಹ ಯಾವತ್ತಿಗೂ ತನ್ನ ಮೌಲ್ಯ ಕಳೆದುಕೊಂಡಂತ ಇತಿಹಾಸವೇ ಇಲ್ಲ. ಭೂಮಿಯ ಗರ್ಭದೊಳಗೆ ಅಗಾಧವಾದ ಚಿನ್ನ ನಿಕ್ಷೇಪ ಇದ್ದರು ಚಿನ್ನದ ಗಣ್ಯತೆ ಮಾತ್ರ ನಗನ್ಯವಾದಂತಿಲ್ಲ.
ಚಿನ್ನದ ಬಗ್ಗೆ ಉದ್ಘಾರ ತೆಗೆಯುವಾಗೆಲ್ಲ ಭಾರತೀಯರು ಮಾತ್ರ ಈ ರೀತಿಯ ಮೋಹ ಪರವಶರು ಎಂದಂದು ಕೊಳ್ಳ ಬೇಕಿಲ್ಲ. ಇದು ಜಾಗತಿಕ ವ್ಯಾಮೋಹಿ ಗಳನ್ನು ಹೊಂದಿರುವ metal. ಸಿಂಧೂ ನಾಗರಿಕತೆ ಮಾತ್ರವಲ್ಲ ಈಜಿಪ್ಟ್ ನಾಗರಿಕತೆಯಲ್ಲೂ ಚಿನ್ನಕ್ಕೆ ವಿಶೇಷ ಸ್ಥಾನವೇ ಇತ್ತು.
ಈಜಿಗಳಂತೂ ಮಮ್ಮಿಯ ಪೆಟ್ಟಿಗೆ ಒಳಗೆ ಚಿನ್ನವನ್ನು ಇಡುತ್ತಿದ್ದರು ಅಲ್ಲಿ ಚಿನ್ನ ಅಮರತ್ವದ ಸಂಕೇತ. ಇಂತಹದೇ ಆಚರಣೆ ದಕ್ಷಿಣ ಅಮೆರಿಕದ ಪೆರುವಿನಲ್ಲಿ ಇತೆಂಬ ಕುರುಹಿದೆ. ಗ್ರೀಸ್ ನಾಗರಿಕತೆಯಲ್ಲಿ ಚಿನ್ನವೆಂದರೆ ಸ್ವರ್ಗದಿಂದ ಒಂದು ತುಂಡು ಅಲ್ಲಿ ದೈವತ್ವ ಕ್ಕಿಂತ ಮಿಗಿಲಾದ ಸ್ಥಾನ ಚಿನ್ನಕ್ಕೆ. ಇನ್ನು ಭಾರತದಲ್ಲಿ ಚಿನ್ನ ಯಾವ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಅನ್ನೋದನ್ನ ನಾವು ಚರಿತ್ರೆಯಲ್ಲಿ ತಿಳಿದುಕೊಂಡಿದ್ದೇವೆ ವಸಾಹತುಶಾಹಿಗಳು ದೇಶಕ್ಕೆ ಲಗ್ಗೆ ಇಟ್ಟು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕೆ ಒಂದು ಪ್ರಮುಖ ಕಾರಣ ಚಿನ್ನವೆ ಇಲ್ಲಿನ ರಾಜರು ಚಿನ್ನದ ನಾಣ್ಯಗಳನ್ನು ಉಪಯೋಗಿಸುತ್ತಿದ್ದರು ಬೀದಿಬದಿಯಲ್ಲಿ ಬೆಳ್ಳಿ ಬಂಗಾರ ಮುತ್ತು ರತ್ನಗಳನ್ನ ಮಾರಾಟ ಮಾಡುತ್ತಿದ್ದರು.
ಕೇಳುವುದಕ್ಕೆ ತುಂಬಾ ಸೊಗಸಾಗಿದೆ ಚಿನ್ನದ ಬಗ್ಗೆ ಚಿನ್ನದಂತ ಮಾತುಗಳು. ಚಿನ್ನ ಬರಿಯ ಲೋಹವಲ್ಲ ಶ್ರೀಮಂತಿಕೆಯ ಸಂಕೇತ ಕೂಡ ಶೃಂಗಾರದ ಸಾರಥಿ ಕೂಡ. ಹಾಗೆಯೇ ಪ್ರಸ್ತುತ ವಾಸ್ತವಂಶಗಳಲ್ಲಿ ಚಿನ್ನದ ಕಥೆಯನ್ನ ಮಾತನಾಡುವುದಾದರೆ ಚಿನ್ನವು ನಾಗರೀಕತೆ ಯ ಜೊತೆ ಜೊತೆಗೆ ಹುಟ್ಟಿಕೊಂಡರೂ ಕೂಡ ನಾಗರಿಕತೆಯ ನಂತರ ಚಿನ್ನ ಬರಿಯ ಆಭರಣವಾಗಿರದೆ ಬ್ಯಾಂಕುಗಳಲ್ಲಿ ಖಜನೆಗಳಲ್ಲಿ ಸಂಗ್ರಹಿಸಿಡುವ ನಮ್ಮ ಹೂಡಿಕೆಯ ಮೂಲವಾಗಿ ಕೂಡ ತನ್ನ ವರ್ಚಸ್ಸನ್ನು ಇನ್ನು ಅಧಿಕ ಸ್ತರದಲ್ಲಿ ಇಟ್ಟುಕೊಳ್ಳಲಾರಂಬಿಸಿತು.
ನಂತರ ಚಿನ್ನಕ್ಕೆ ಗುಣಮಟ್ಟ ಬಂದಿತು, ಕರೆನ್ಸಿಯ ಮೌಲ್ಯವು ನಿರ್ದಿಷ್ಟ ಪ್ರಮಾಣದ ಚಿನ್ನದ ಮೇಲೆ ಆಧಾರಿತವಾದಾಗ ಇದು ವಿತ್ತೀಯ ವ್ಯವಸ್ಥೆಯಾಗಿತ್ತು. ಉದಾಹರಣೆಗೆ, US ಡಾಲರ್‌ನ ಮೌಲ್ಯವು ಅದನ್ನು ವಿನಿಮಯ ಮಾಡಿಕೊಳ್ಳಬಹುದಾದ ಚಿನ್ನದ ಪ್ರಮಾಣವನ್ನು ಅವಲಂಬಿಸಿರುತ್ತದೆ.
ಚಿನ್ನವು ಇಂದಿಗೂ ಆರ್ಥಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ, ಅದಕ್ಕಾಗಿಯೇ ಹೆಚ್ಚಿನ ಕೇಂದ್ರೀಯ ಬ್ಯಾಂಕುಗಳು ಚಿನ್ನದ ನಾಣ್ಯಗಳ ದೊಡ್ಡ ಸಂಗ್ರಹವನ್ನು ಹೊಂದಿವೆ. ಭಾರತದಂತಹ ಅನೇಕ ದೇಶಗಳಲ್ಲಿ ಇದು ಸಾಂಸ್ಕೃತಿಕವಾಗಿಯೂ ಬಹಳ ಮಹತ್ವದ್ದಾಗಿದೆ.
ಹಿಂದೆ, ಚಿನ್ನದ ಮೇಲೆ ಹೂಡಿಕೆ ಮಾಡಿದ ಜನರು ಇತರರಿಗಿಂತ ಹೆಚ್ಚು ಸುಲಭವಾಗಿ ಆರ್ಥಿಕ ಏರಿಳಿತಗಳನ್ನು ನ್ಯಾವಿಗೇಟ್ ಮಾಡಲು ಸಾಧ್ಯವಾಯಿತು. ಇದು ಇಂದಿಗೂ ಸಂವೇದನಾಶೀಲ ಹೂಡಿಕೆಯ ಆಯ್ಕೆಯಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಚಿನ್ನದ ಹೂಡಿಕೆಯನ್ನು ಪ್ರಾರಂಭಿಸಲು ಉತ್ತಮ ಮಾರ್ಗವೆಂದರೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವುದು ಅಥವಾ ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳನ್ನು ಖರೀದಿಸುವುದು.
ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳಿಗೆ ಚಿನ್ನದ ಆಭರಣಗಳಿಗಿಂತ ಆದ್ಯತೆ ನೀಡಲಾಗುತ್ತದೆ ಏಕೆಂದರೆ ಅವುಗಳು ಹೆಚ್ಚಿನ ಮೇಕಿಂಗ್ ಚಾರ್ಜ್ ಹೊಂದಿಲ್ಲ ಮತ್ತು ಶುದ್ಧವಾದ 24 ಕೆಟಿ ರೂಪದಲ್ಲಿ ಲಭ್ಯವಿದೆ. ನೀವು 2 ಗ್ರಾಂ ಕಡಿಮೆ ಮೌಲ್ಯದ ಚಿನ್ನದ ನಾಣ್ಯಗಳನ್ನು ಕೂಡಾ ಖರೀದಿಸಬಹುದು. ಹಾಗಾದ್ರೆ ಡಿಜಿಟಲ್ ಚಿನ್ನ ಎಂದರೇನು? ಅಂತ ಏನಾದ್ರೂ ನಿಮಗೆ ಡೌಟ್ ಇದ್ರೆ ಕೇಳಿ
ಇತ್ತೀಚಿನ ವರ್ಷಗಳಲ್ಲಿ ಯುವ ಹೂಡಿಕೆದಾರರಲ್ಲಿ ಡಿಜಿಟಲ್ ಚಿನ್ನದ ಹೂಡಿಕೆಗಳು ಬಹಳ ಜನಪ್ರಿಯವಾಗಿವೆ. ಚಿನ್ನವನ್ನು ಭೌತಿಕವಾಗಿ ಹಿಡಿದಿಟ್ಟುಕೊಳ್ಳದೆಯೇ ಅದರಲ್ಲಿ ಹೂಡಿಕೆ ಮಾಡುವ ವಾಸ್ತವ ಮಾರ್ಗವಾಗಿದೆ. ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಕನಿಷ್ಠ ಮೊತ್ತವು ಕೇವಲ 1 ರೂಪಾಯಿ ಆದರೆ ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳು ನೀವು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತದ ಮಿತಿಯನ್ನು ಹೊಂದಿವೆ.
ಹೀಗೆ ಚಿನ್ನದ ಬಗ್ಗೆ ಮಾತಾಡ್ತಾ ಹೋದ್ರೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಕೂಡ ಇದ್ರ value ಕಡಿಮೆ ಆದಂತಿಲ್ಲ. ಮೇಲಾಗಿ ಸ್ವರ್ಣ ಮೋಹ ಪಾಶಕ್ಕೆ ಬೀಲದವರಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ ಚಿನ್ನಕ್ಕೆ ಚಿನ್ನವೇ ಸಾಟಿ ಅನ್ನೋದು.