ಉಡುಪಿ: ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಅವರ ಅಕ್ರಮ ವಲಸೆ ತಡೆಗಟ್ಟಲು ಸರಕಾರ ಎಷ್ಟು ಕ್ರಮ ಕೈಗೊಂಡರು ಕೂಡ ಸಾಲುತ್ತಿಲ್ಲ. ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಇವರುಗಳ ಹಾವಳಿ ಹೆಚ್ಚುತ್ತಿದೆ. ಇದೀಗ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ನಮ್ಮ ಉಡುಪಿಯ ಮಲ್ಪೆಯಲ್ಲಿ ಸಿಕ್ಕಿದೆ.
ನಕಲಿಯಾಗಿ ಭಾರತದ ಆಧಾರ್ ಕಾರ್ಡ್ ಸೃಷ್ಟಿಸಿ ಭಾರತಕ್ಕೆ ಬಂದಿದ್ದಾರೆ. ಇವರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವರ ಹೆಸರು ಸಿಕ್ಕಿಂ ನ ಅಗರ್ತಲಾದ ಕಾಜೋಲ್ ಎಂದು ತಿಳಿದು ಬಂದಿದೆ. ಹಾಗೇನೇ ಇವರ್ಗಳಿಗೆ ಉಸ್ಮಾನ್ ಎನ್ನುವಾತ ಉದ್ಯೋಗ ಕೊಡಿಸುವ ಭರವಸೆ ಕೊಟ್ಟು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ ಎಂದು ಪೊಲೀಸ್ ತಪಾಸಣೆ ವೇಳೆ ಪತ್ತೆಯಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈ ಗೆ ತೆರಳಲು ಮಹಮ್ಮೆದ್ ಮಾಣಿಕ್ ಎಂಬಾತ ಪ್ರಯತ್ನಿಸಿದ್ದಾನೆ. ಇವನ ಇಮಿಗ್ರಷನ್ ವೇಳೆ ಇವ ಬಾಂಗ್ಲಾ ಪ್ರಜೆ ಎಂದು ಕಂಡುಬಂದಿದೆ. ಈತನ ವಿಚಾರಣೆ ವೇಳೆ ಅನೇಕರು ಮಲ್ಪೆಯಲ್ಲಿ ಇರುವುದು ಪತ್ತೆಯಾಗಿದೆ. ಅಕ್ರಮ ವಲಸಿಗರ ಪತ್ತೆಗಾಗಿ ಈಗಾಗಲೇ ಪೊಲೀಸ್ ರು ಕಾರ್ಯಾಚರಣೆ ಮುಂದುವರೆಸಿದ್ದಾರೆ.