ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುವುದೇ ಸಹಸವಾಗಿದೆ. ರಸ್ತೆ ತುಂಬಾ ಹೊಂಡಾಗುಂಡಿ. ಎಷ್ಟೇ ಗಟ್ಟಿ ಗುಂಡಿಗೆ ಇದ್ದರೂ ಯಾವ ಕಡೆಯಿಂದ ಹೋದರೂ ಗುಂಡಿಗೆ ಬೀಳುವುದು ತಪ್ಪುವುದಿಲ್ಲ. ಪ್ರತಿ ನಿತ್ಯ ಸಾವಿರಾರು ಜನರು ಓಡಾಡುವ ರಸ್ತೆಯ ಕಥೆಯೇ ಹೀಗಾದರೆ ಹೇಗೆ ?
ಸುಮಾರು 13 ಕಿ. ಮೀ ಉದ್ದದ ರಸ್ತೆ ಅಂದರೆ ಗುರುವಾಯನ ಕೆರೆಯಿಂದ ಕುಪ್ಪೆಟ್ಟಿ ವರೆಗೆ 50ಕ್ಕೂ ಮಿಕ್ಕಿದ ಗುಡಿಗಳಿವೆ. ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರೆಲ್ಲರೂ ಆಸ್ಪತ್ರೆಯ ದಾರಿ ನೋಡಿದವರೇ.
ಪುತ್ತೂರು ಬೆಳ್ತಂಗಡಿ ತಾಲೂಕು ಪಟ್ಟಣಗಳನ್ನು ಬೆಸೆಯುವ ಪ್ರಮುಖ ಕೊಂಡಿಯೇ ಈ ಗುರುವಾಯನಕರೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಗಳು.
ರಸ್ತೆಯ ಕಳಪೆ ಗುಣಮಟ್ಟದ ಕಾಮಗಾರಿಯ ಜೊತೆಗೆ ವ್ಯವಸ್ಥಿತ ರೀತಿಯಲ್ಲಿ ಚರಂಡಿಗಳು ಇಲ್ಲದಿರುವುದರಿಂದ ಮಳೆ ನೀರು ಹರಿದು ಹೋಗಲು ಅವಕಾಶವಿಲ್ಲದಗಿದೆ. ಮತ್ತೊಂದೆಡೆ ನೀರು ನಿಂತು ಉಂಟಾದ ಹೊಂಡ ಗುಂಡಿಗಳು ಸಂಚಾರಕ್ಕೆ ಸಂಚಾಕಾರವಾಗಿದೆ.
ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಬರುವ ಈ ರಸ್ತೆ 20 ಕಿಮೀ. ಉದ್ದಕ್ಕೆ ಸರಿಯಾಗಿ ಅರ್ಧ ಕಿಮೀ ಕೂಡಾ ಸರಿಯಾದ ರಸ್ತೆಯೇ ಇಲ್ಲ. ಇಡ್ಯಾ, ಪರಪ್ಪು, ನಾಳ, ಗೇರುಕಟ್ಟೆ, ರೇಶ್ಮೇರೋಡ್, ಜಾರಿಗೆಬೈಲ್, ಯಂತ್ರಡ್ಕ, ಮಾವಿನಕಟ್ಟೆ, ಹಾಲೇಜಿ, ಕುಪ್ಪೆಟ್ಟಿ ಪೇಟೆಯ ತನಕ ರಸ್ತೆ ತುಂಬಾ ಗುಂಡಿಗಳೇ. ಈ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಸಾಧ್ಯವೇ ಇಲ್ಲ . ಒಂದು ವೇಳೆ ತಪ್ಪಿಸುವ ಸಾಹಸ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಅಲ್ಲಲ್ಲಿ ರಿಪೇರಿ ಕಾಮಗಾರಿ ಆರಂಭಿಸಿ ಅರ್ಧಕ್ಕೇ ನಿಲ್ಲಿಸಲಾಗಿದೆ. ಜೊತೆಗೆ ಚರಂದಿಯಿಂದ ತೆಗೆದ ಹಸಿ ಮಣ್ಣನ್ನು ರಾಷ್ಟ್ರ ಪಕ್ಕದಲ್ಲೇ ಹಾಕಿ ಈ ಮಳೆಗೆ ಪ್ರಯಾಣ ಮತ್ತಷ್ಟು ಕಷ್ಟಕರ ಆಗುವಂತೆ ಮಾಡಲಾಗಿದೆ.
ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಸಂಚಾರ ಯೋಗ್ಯವಾಗಿ ಪರಿವರ್ತಿಸಬೇಕೆಂಬುದು ಜನರ ಆಗ್ರಹ ವಾಗಿದೆ.