*ಒಂದೇ ವಾರದಲ್ಲಿ ಪುತ್ತೂರಿಗೆ ಬಂತು 24 ಕೋಟಿ ರೂ.. ಅನುದಾನ – ಕೃಷ್ಣಪ್ರಸಾದ್ ಆಳ್ವ*
ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕರಿಂದ ಇನ್ನಷ್ಟು ಅನುದಾನ ಬಿಡುಗಡೆಯಾಗಲಿದೆ. ಬ್ಲಾಕ್ ಅಧ್ಯಕ್ಷ -ಕೆ ಪಿ ಆಳ್ವ
ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಂದೇ ವಾರದಲ್ಲಿ 24 ಕೋಟಿ ಅನುದಾನ ಬಂದಿದ್ದು ಇದು ಶಾಸಕ ಅಶೋಕ್ ರೈ ಅವರ ಅಭಿವೃದ್ದಿಪರ ಕಾಳಜಿಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರು ತಿಳಿಸಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಂಕ್ರಿಟೀಕರಣ ಕ್ಕೆ 20 ಕೋಟಿ ರೂ.. ಅನುದಾನ ಬಂದಿದ್ದು ಅದರ ಗುದ್ದಲಿ ಪೂಜೆ ನಡೆಸಲಾಗಿದೆ. ಈ ರಸ್ತೆಯ ಅಭಿವೃದ್ದಿ ಹಲವು ವರ್ಷಗಳ ಬೇಡಿಕೆಯಾಗಿದ್ದು ಈ ಬಾರಿ ಅದಕ್ಕೆ ಕಾಲ ಕೂಡಿ ಬಂದಿದೆ. ಪೂರ್ಣಪ್ರಮಾಣದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಉತ್ತಮ ರಸ್ತೆಯ ವ್ಯವಸ್ಥೆ ಆಗಲಿದೆ. ಅದೇ ರೀತಿ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು, ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ತಲಾ 1 ಕೋಟಿ ರೂ…. ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ ಸೇರಿ ಒಟ್ಟು ನಾಲ್ಕು ಕೋಟಿ ಅನುದಾನ ಬಿಡುಗಡೆಯಾಗಿದ್ದು ಈಮೂರು ಕಾಲೇಜುಗಳು ಶೀಘ್ರದಲ್ಲೇ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.