ಪುತ್ತೂರು: ನೆಹರೂ ನಗರದಲ್ಲಿರುವ ಪಟ್ಲ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮಾತಾ ಗ್ರಾಫಿಕ್ಸ್ ನವರ ಶ್ರೀಮಾತಾ ಸ್ಮರಣಿಕಾ ಮಳಿಗೆಯು ದೀಪಾವಳಿಯ ಶುಭಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.
ಸ್ಮರಣಿಕಾ ಸಂಸ್ಥೆಯ ಮಾಲಿಕರಾದ ರಾಜೇಶ್ ಜೈನರಗುರಿಯವರ ತಂದೆ ಗೋಪಾಲ್ ಕುಲಾಲ್, ಮತ್ತು ತಾಯಿ ರತ್ನಾವತಿ ಯವರು ಹಾಗೂ ಪಟ್ಲ ಕಾಂಪ್ಲೆಕ್ಸ್ ಮಾಲಿಕರಾದ ವಿಜಯ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಸಾದ್ ಕೊಯಿಲ, ಜೀವಿತಾ ರಾಜೇಶ್, ಸಂತೋಷ್ ಕುಲಾಲ್, ಮನ್ಮಥ ಶೆಟ್ಟಿ, ದಾಮೋದರ್ ಪರಮಾರುರವರು ಉಪಸ್ಥಿತರಿದ್ದರು. ಹರೀಶ್ ಮಂಜೊಟ್ಟಿ, ಪ್ರಕಾಶ್ ಮಿತ್ತೂರು ಹಾಗೂ ಶ್ರೀ ಮಾತಾ ಸಂಸ್ಥೆಯ ಭಾರತಿಯವರು ಕಾರ್ಯಕ್ರಮಕ್ಕೆ ಸಹಕರಿಸಿದರು..
ಅತಿ ಕಡಿಮೆ ದರದಲ್ಲಿ ಸುಂದರವಾದ ಮತ್ತು ವಿಶೇಷ ಅಧುನಿಕ ಶೈಲಿಗಳ ಸ್ಮರಣಿಕೆಗಳನ್ನು ಮತ್ತು ಗಿಫ್ಟ್ ಆರ್ಟ್ ಗಳನ್ನು ಮಾಡಿಕೊಡಲಾಗುವುದು ಎಂದು ಮಾಲಿಕರಾದ ರಾಜೇಶ್ ಜೈನರಗುರಿಯವರು ಈ ಸಂದರ್ಭದಲ್ಲಿ ತಿಳಿಸಿದರು.