ಪೆರ್ನೆ: ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾನಗರ-ಪೆರ್ನೆ ಬಂಟ್ವಾಳ ತಾಲೂಕು ಇದರ ನೂತನ ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ’ಪದಗ್ರಹಣ’ದ ಪ್ರಯುಕ್ತ.., ಯೇನಪೋಯ ವಿಶ್ವವಿದ್ಯಾಲಯ, ದೇರಳಕಟ್ಟೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇವರ ಜಂಟಿ ಆಶ್ರಯದಲ್ಲಿ “ಬೃಹತ್ ಆರೋಗ್ಯ ಮೇಳ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ” ವನ್ನು ದಿನಾಂಕ 10-11-2024 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9:00 ರಿಂದ ಪೆರ್ನೆ ಶ್ರೀ ರಾಮಚಂದ್ರ ವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪೆರ್ನೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ತೋಯಜಾಕ್ಷ ಶೆಟ್ಟಿ ಯವರು ನೆರವೇರಿಸಿ,ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದ ಸಂಚಾಲಕರಾದ ಶ್ರೀ ಹರೀಶ್ ಭಂಡಾರಿ.ಟಿ.BA.,LLB,ಯವರು ಅಧ್ಯಕ್ಷತೆಯನ್ನು ವಹಿಸಲಿರುವರು.ಮುಖ್ಯ ಅತಿಥಿಗಳಾಗಿ ಡಾ.ತಿಮ್ಮಯ್ಯ ಹೆಚ್.ಆರ್.ಜಿಲ್ಲಾ ಆರೋಗ್ಯಾಧಿಕಾರಿ ದ.ಕ.ಜಿಲ್ಲೆ,ಡಾ.ಅಶೋಕ ಕುಮಾರ್ ರೈ ತಾಲೂಕು ಅರೋಗ್ಯಾಧಿಕಾರಿ ಬಂಟ್ವಾಳ,ಡಾ.ಶಶಿಕಲಾ ವೈಧ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ,ಡಾ.ಅಶ್ವಿನಿ ವಿಸ್ತರಣಾಧಿಕಾರಿ ಯೇನಪೋಯ ವಿಶ್ವವಿದ್ಯಾನಿಲಯ,ಡಾ.ಮಹಾಲಿಂಗೇಶ್ವರ ಭಟ್ ಧನ್ವಂತರಿ ಆಸ್ಪತ್ರೆ ಪುತ್ತೂರು, ಶ್ರೀ ರಾಮಕಿಶನ್ನೇಲ್ತೊಟ್ಟು ಅಧ್ಯಕ್ಷರು ಲಯನ್ಸ್ ಕ್ಲಬ್ ಮಾಣಿ,ಹನೀಫ್ ಹಾಜಿ ಅಧ್ಯಕ್ಷರು ಎಮ್.ಫ್ರ್ರೆಂಡ್ಸ್ ಹಾಗೂ ಹದಾಯ ಫೌಂಡೇಶನ್, ಕೇಶವ ರಾಮ್ ವ್ಯವಸ್ಥಾಪಕ ನಿರ್ದೇಶಕರು COCO Guru Puttur,ಸುನೀಲ್ ಕುಮಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೆರ್ನೆ,ಮುಸ್ತಫಾ ಕಡಂಬು ಉಧ್ಯಮಿಗಳು ಅನಿತಾ ಬೀಡಿ,ಶ್ರೀಮತಿ ಆಯಿಷಾ ಪೆರ್ನೆ ಆರೋಗ್ಯ ತಪಾಸಣಾಧಿಕಾರಿ ಮಂಗಳೂರು ವಿಶ್ವವಿದ್ಯಾನಿಲಯ,ಶ್ರೀ ಸತ್ಯನಾರಾಯಣ ರೈ ಮುಖ್ಯ ಗುರುಗಳು ಶ್ರೀ ರಾಮಚಂದ್ರ ವಿದ್ಯಾಲಯ ಪೆರ್ನೆ,ಶ್ರೀ ಸುಲೈಮಾನ್ ಸಂಚಾಲಕರು ಮೀದಿಯಾ ಹಿರಿಯ ಪ್ರಾಥಮಿಕ ಶಾಲೆ ದೋರ್ಮೆ ಇವರಗಳು ಉಪಸ್ಥಿತರಿರಲಿದ್ದಾರೆ.
ಈ ಆರೋಗ್ಯ ಮೇಳದಲ್ಲಿ ಲಭ್ಯವಿರುವ ವೈದ್ಯರು ಮತ್ತು ಸೇವಾ ಸೌಲಭ್ಯಗಳು:-
1.ವೈದ್ಯಕೀಯ ತಜ್ಞರು
2.ಶಸ್ತ್ರ ಚಿಕಿತ್ಸಕರು
3.ಮಕ್ಕಳ ತಜ್ಞರು
4.ಸ್ತ್ರೀ ರೋಗ ತಜ್ಞರು
5.ಎಲುಬು ಮತ್ತು ಕೀಲು ತಜ್ಞರು
6.ಚರ್ಮ ಮತ್ತು ಲೈಂಗಿಕ ತಜ್ಞರು
7.ಕಿವಿ, ಮೂಗು, ಗಂಟಲು ತಜ್ಞರು
8.ಕಣ್ಣಿನ ಪರೀಕ್ಷಾ ಕೇಂದ್ರ
9.ದಂತ ಚಿಕಿತ್ಸಾ ಕೇಂದ್ರ
10.ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ
11.ಅಸಾಂಕ್ರಾಮಿಕ ರೋಗ ತಪಾಸಣೆ (NCP Clinic)
12.ಆಯುಷ್ಯ, ಆಯುರ್ವೇದಿಕ್, ಸಿದ್ಧ,ಹೋಮಿಯೋಪತಿ, ಯುನಾನಿ ಔಷದಿ
13.ಕ್ಷಯರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆ
14.ಆಪ್ತ ಸಮಾಲೋಚನೆ (ಹದಿಹರೆಯದ ಮಕ್ಕಳಿಗೆ)
15.ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ತಪಾಸಣೆ
ಮತ್ತು “ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ Screening test for breast (Mammogram) ಮೊಬೈಲ್ ಕ್ಲಿನಿಕ್ ಬಸ್ಸಿನಲ್ಲಿ ತಪಾಸಣಾ ವ್ಯವಸ್ಥೆಯಿರುತ್ತದೆ.
ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಈ ಕಾರ್ಯಕ್ರಮದ ಆಯೋಜಕರಾದ ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಅಧ್ಯಕ್ಷರಾದ ಶ್ರೀ ಮಾಕ್ಸಿಂ ಲೋಬೋ ,ಕಾರ್ಯದರ್ಶಿ ಯಾದ ಶ್ರೀ ಸನತ್ ಆಳ್ವ ಹಾಗೂ ವಿದ್ಯಾಲಯದ ಪರವಾಗಿ ಶ್ರೀ ಶೇಖರ ರೈ ಪ್ರಾಂಶುಪಾಲರು ಮತ್ತು ಉಪನ್ಯಾಸಕರು/ಸಹ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ವಿನಂತಿಸಿಕೊಂಡಿದ್ದಾರೆ.
ಅಯೋಧ್ಯಾನಗರ-ಪೆರ್ನೆಯಲ್ಲಿ ನವೆಂಬರ್ 10 ರಂದು ನೂತನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ “ಬೃಹತ್ ಆರೋಗ್ಯ ಮೇಳ”