ಬೆಳ್ಳುಳ್ಳಿಯು ಒಂದು ಆಯುರ್ವೇದಿಕ್ ಗಿಡಮೂಲಿಕೆಯಾಗಿದ್ದು, ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಆಯುರ್ವೇದ ಔಷಧಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಅನ್ನು ಕಡಿಮೆ ಮಾಡುತ್ತದೆ, ರಕ್ತವನ್ನು ಶುದ್ಧೀಕರಿಸುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ, ಕೀಲುಗಳನ್ನು ಬಲಪಡಿಸುತ್ತದೆ, ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ, ಕೆಮ್ಮು ಮತ್ತು ಹೃದ್ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ.
ಪೌಷ್ಟಿಕತಜ್ಞೆ ಅವರ ಪ್ರಕಾರ ಬೆಳ್ಳುಳ್ಳಿಯನ್ನು ಹುರಿಯುವುದರಿಂದ ಅದರ ಪೋಷಕಾಂಶಗಳು ಹೆಚ್ಚಾಗುತ್ತದೆ. ಅದರ ಶಕ್ತಿ ನೂರು ಪಟ್ಟು ಹೆಚ್ಚಾಗುತ್ತದೆ. ಇದು ಕೆಮ್ಮು, ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಬೆಳ್ಳುಳ್ಳಿಯು ಮ್ಯಾಂಗನೀಸ್, ವಿಟಮಿನ್ ಬಿ 6, ವಿಟಮಿನ್ ಸಿ, ಸೆಲೆನಿಯಮ್ ಮತ್ತು ಫೈಬರ್ ನಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ಅದರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬಹುದು ಮತ್ತು ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.