ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿತ್ತಿದ್ದು ಅದರಂತೆ ಎ ಗ್ರೇಡ್ ದೇವಾಲಯವಾಗಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯ ಸಲುವಾಗಿ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಸಲಾಗಿದೆ.
ಹಿಂದೆಯು ಬೋರ್ಡ್ ಅಳವಡಿಸಿದ್ದರು ಸಹ ಈ ಬಾರಿ ಕೆಲವೊಂದು ಚಿತ್ರಗಳನ್ನು ಬರೆದು ಬೋರ್ಡ್ ಅಳವಡಿಸಿದ್ದು ಮುಂದೆ ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾಧಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಮಹಾಲಿಂಗೇಶ್ವರ ಭಕ್ತ ಸಮಾಜ ಸಾಮಾಜಿಕ ಜಾಲದಲ್ಲಿ ಬರೆದುಕೊಂಡು ಹಂಚುತ್ತಿದ್ದಾರೆ