ಪುತ್ತೂರು :ಕೆಮ್ಮಾಯಿ ಶ್ರೀ ಅಶ್ವತ್ತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನ. 24 ರಂದು ಕೆಮ್ಮಾಯಿ ಕಟ್ಟೆಯ ಬಳಿ ನಡೆಸಲಾಯಿತು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ದಯಾನಂದ ಗೌಡ ಕೆಮ್ಮಾಯಿ ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, ಯುವಕ ಮಂಡಲದ ಗೌರವಾಧ್ಯಕ್ಷರಾದ ಚಿದಾನಂದ ರೈ, ಕಾರ್ಯದರ್ಶಿ ಸುರೇಂದ್ರ ಬಡಾವು, ಸದಸ್ಯರುಗಳಾದ ಅಶೋಕ್ ಟಿ ಎಂ ಸಿ, ಯಶವಂತ ಕೆಮ್ಮಾಯಿ, ಕೇಶವ ಗೌಡ, ನಾಗೇಶ್, ಸಂತೋಷ, ಪ್ರಶಾಂತ ಕೆಮ್ಮಾಯಿ, ಸುಧಾಕರ್ ನಾಯ್ಕ್, ಯೋಗೀಶ್, ಪ್ರಕಾಶ್ ಕೆಮ್ಮಾಯಿ, ಲಿಂಗಪ್ಪ ಗೌಡ, ಕೃಷ್ಣಪ್ಪ ಗೌಡ, ಚೇತನ್ ಭರತ ಪುರ, ಮಂಜುನಾಥ ಕೆಮ್ಮಾಯಿ, ಪ್ರವೀಣ್ ಕೇಬಲ್, ನಾರಾಯಣ ಭಟ್, ಹಾಗೂ ಕೆಮ್ಮಾಯಿ ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.