ಪುತ್ತೂರು : ಬನ್ನೂರು ಗ್ರಾಮ ಪಂಚಾಯತ್ ನಲ್ಲಿ ಸಿಡಿಲು ಬರುತ್ತಿದ್ದ ಸಂದರ್ಭದಲ್ಲಿ ಕಂಪ್ಯೂಟರ್ ಆಫ್ ಮಾಡಲು ಹೋದ ವೇಳೆ ಸಿಡಿಲು ಬಡಿದು ಪಂಚಾಯತ್ ಪಿಡಿಓ ಅವರು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ 4:00ಗೆ ನಡೆದಿದೆ.
ಬನ್ನೂರು ಗ್ರಾಮ ಪಂಚಾಯತ್ ಪಿಡಿಒ ಚಿತ್ರಾವತಿಯವರು ಇಂದು ಕಚೇರಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಂದಾಗ ಕಚೇರಿಯ ಕಂಪ್ಯೂಟರ್ ಆಫ್ ಮಾಡುವ ಸಂದರ್ಭ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಪಂಚಾಯತ್ ನ ಅಧ್ಯಕ್ಷರಾದ ಸ್ಮಿತಾ, ಹಾಗೂ ಸದಸ್ಯರುಗಳಾದ ತಿಮ್ಮಪ್ಪ ಮೂಡಾಯೂರು, ಜಯ ಏಕ,, ಹರಿಣಾಕ್ಷಿ, ರಾಘವೇಂದ್ರ ಇವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇದೀಗ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು , ಚೇತರಿಸಿಕೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.