ಮಿಯ್ಯಾರಿನಲ್ಲಿ ಮುಂದಿನ ಜನವರಿಯಲ್ಲಿ ನಡೆಯಬೇಕಿದ್ದ ಲವ – ಕುಶ ಜೋಡುಕರೆ ಕಂಬಳ ಕೂಟ ನಿಗದಿತ ದಿನದಂದು ನಡೆಯುವುದಿಲ್ಲ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವ ಕಾರಣದಿಂದ ಕಂಬಳ ನಡೆಸಲಾಗುವುದಿಲ್ಲ ಎಂದು ಕಾರ್ಕಳ ಕಂಬಳ ಸಮಿತಿ ತಿಳಿಸಿದೆ.
ಡಿ.07 ರಂದು ನಡೆಯಬೇಕಿದ್ದ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳವು ಸಂಪೂರ್ಣ ಸಿದ್ದತೆಯಾಗಿದ್ದರು ಪೆಂಗಲ್ ಚಂಡಮಾರುತದಿಂದ ಸುರಿದ ಬಾರೀ ಮಳೆ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದನ್ನು ಜಿಲ್ಕಾ ಕಂಬಳ ಸಮಿತಿ ಮತ್ತು ಹೊಕ್ಕಾಡಿಗೋಳಿ ಕಂಬಳ ಸಮಿತಿ ಜಂಟಿಯಾಗಿ ಮುಂದೂಡಿತ್ತು. ಹೀಗಾಗಿ ಮಿಯ್ಯಾರು ಕಂಬಳ ರದ್ದತಿಯಿಂದ ತೆರವಾದ ಜ.04 ರಂದು ಹೊಕ್ಕಾಡಿಗೋಳಿ ಕಂಬಳ ನಡೆಸಲು ಜಿಲ್ಲಾ ಸಮಿತಿ ಅನುಮತಿಸಿದೆ ಎಂದು ದೇವಿಪ್ರಸಾದ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ದಿನಾಂಕದಂದು ಹೊಕ್ಕಾಡಿಗೋಳಿ ಕಂಬಳ ನಡೆಸಲು ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.