ಬಂಟ್ವಾಳ : ವಿಟ್ಲದಲ್ಲಿ ಉದ್ಯಮವನ್ನು ನಡೆಸುತ್ತಿರುವ ಉದ್ಯಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಬದನಾಜೆ ನಿಡ್ಯ ಎಂಬಲ್ಲಿ ನಡೆದಿದೆ.
ಮೃತರು ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60.ವ.) ಎಂದು ತಿಳಿದು ಬಂದಿದೆ.
ದಾಮೋದರ್ ಪೂಜಾರಿ ತಮ್ಮ ಮನೆಯ ಮೇಲಿನ ಹಿಂಬದಿ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.