ವಿಟ್ಲ: ಯುವವಾಹಿನಿ (ರಿ) ವಿಟ್ಲ ಘಟಕದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲ ಪೊನ್ನೊಟ್ಟು ಶಿವಗಿರಿ ಬ್ರಹ್ಮ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲ ಘಟಕದ ಅಧ್ಯಕ್ಷ ರಾಜೇಶ್ ವಿಟ್ಲ ವಹಿಸಿದ್ದರು.
ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಪದಪ್ರದಾನ ನೆರವೇರಿಸಿ ನೊಂದವರನ್ನು ಮೇಲೆತ್ತುವ ಕಾರ್ಯ ಬಿಲ್ಲವ ಸಂಘಗಳಿಂದ ನಡೆಯಬೇಕು. ಧರ್ಮಯುಕ್ತ ಕಾರ್ಯಗಳನ್ನು ಪ್ರೋತ್ಸಾಹಿಸ ಬೇಕು. ಸಮಾಜದ ಬಂಧುಗಳಲ್ಲಿ ನೈಜ ಪ್ರೀತಿ, ಅಭಿಮಾನವಿಡಬೇಕು. ಪ್ರತೀ ಬಿಲ್ಲವ ಮನೆಗಳನ್ನು ಭೇಟಿ ಮಾಡಿ ಸಂಘಟನೆಯ ಬಲ ವೃದ್ಧಿಸಬೇಕಾಗಿದೆ ಎಂದರು.
ಸಮಾರಂಭವನ್ನು ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪಟ್ಲ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ರಾಜಾರಾಮ್ ಕೆ.ಬಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಜಪ್ಪ ಪೂಜಾರಿ ನಿಡ್ಯ ಭಾಗವಹಿಸಿದ್ದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಶುಭ ಹಾರೈಸಿದರು.
ಸಮಾರಂಭದಲ್ಲಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಗಣೇಶ್ ಪೂಂಜರಕೋಡಿ, ವಿಟ್ಲ ಯುವವಾಹಿನಿ ಘಟಕದ ನೂತನ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದುಷಿ ನಯನ ಸತ್ಯನಾರಾಯಣ, ಸಂಗೀತ ಪಾಣೆಮಜಲು, ಹರೀಶ್ ಸಿ.ಹೆಚ್, ಕೃಷ್ಣಪ್ಪ ಪೂಜಾರಿ ಪಾಂಡೇಲು, ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ಪದಗ್ರಹಣದ ಬಳಿಕ ಲಲಿತಾ ಕಲಾ ಸದನ ವಿಟ್ಲ ಇದರ ನೃತ್ಯ ನಿರ್ದೇಶಕಿ ವಿದುಷಿ ನಯನ ಸತ್ಯನಾರಾಯಣ ಅವರ ಭರತನಾಟ್ಯ ವೈಭವ, ಕುಂಡಡ್ಕ ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.
ವಿಟ್ಲ ಯುವವಾಹಿನಿ ಘಟಕದ ಕಾರ್ಯದರ್ಶಿ ಶೋಭಾ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ವಿನೋದ್ ಕುಮಾರ್ ಬೋಳಿಗದ್ದೆ
ಯುವವಾಹಿನಿ ಘಟಕದ ಉದಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ವಿಟ್ಲ ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಮಮತಾ ವಂದಿಸಿದರು.