ಕೃಷಿಹೊಂಡದಲ್ಲಿ ಸೋಡಿಯಂ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿತ್ತು.ಬಳಿಕ ಪೊಲೀಸರು ಮಧುಗಿರಿ ತಾಲೂಕಿನ JMFC ಕೋರ್ಟಿಗೆ ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಹಾಜರಿಪಡಿಸಿದ್ದರು.
ವಿಚಾರಣೆ ಬಳಿಕ ಡ್ರೋನ್ ಪ್ರತಾಪ್ ಅವರನ್ನು ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಹೌದು ಡಿಸೆಂಬರ್ 26ರವರೆಗೂ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಮಧುಗಿರಿ ಜೆ ಎಂ ಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಿಎಂಎಸ್‌ಸಿ ನ್ಯಾಯಾಲಯವು ಡಿಸೆಂಬರ್ 26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಡ್ರೋನ್ ಪ್ರತಾಪ್ ಕಳೆದ ಕೆಲವು ದಿನಗಳ ಹಿಂದೆ ಅನುಮತಿ ಪಡೆಯದೆ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಿಸಿದ್ದ ಘಟನೆ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಮದುಗಿರಿ ತಾಲೂಕು ಮಿಡಿಶೇಸಿ ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದರು. ಬಳಿಕ ಅವರ ಇಬ್ಬರು ಸ್ನೇಹಿತರನ್ನು ಕೂಡ ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದರು.ಇದೀಗ ಡಿಸೆಂಬರ್ 26ರವರೆಗೆ ಅಂದರೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.