ರಾಜ್ಯದಲ್ಲಿ ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ 728 ವಿದೇಶಿಗರು ವಾಸವಾಗಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇವರ ಸಂಖ್ಯೆ ಅತ್ಯಧಿಕವಾಗಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ವಿಧಾನಪರಿಷತ್ ಸದಸ್ಯ ಎಂ ನಾಗರಾಜು ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ರೂಪದಲ್ಲಿ ರಾಜ್ಯದ ಗೃಹ ಇಲಾಖೆ ಈ ಮಾಹಿತಿ ನೀಡಿದೆ.
ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಕಳೆದ ಮೂರು ವರ್ಷಗಳಿಂದ ನೈಜಿರಿಯಾ, ಸುಡಾನ್, ಯೆಮೆನ್ ಹಾಗೂ ಇತರ ದೇಶಗಳಿಂದ ಸುಮಾರು 728 ವಿದೇಶಿಯರು ವಾಸವಾಗಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.
ಇನ್ನು ರಾಜ್ಯದಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸುತ್ತಿರುವ ವಿದೇಶಿಯರಲ್ಲಿ ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪವೂ ಕೇಳಿಬಂದಿದೆ. ರಾಜ್ಯಾದ್ಯಂತ ಇಂತಹ ಸುಮಾರು 104 ಪ್ರಕರಣಗಳು ದಾಖಲಾಗಿವೆ.