ಪುತ್ತೂರು: ಪುತ್ತೂರು ಕೈಗಾರಿಕಾ ಸಂಘ ರಿ. ಇದರ ಸಹ ಸಂಸ್ಥೆ ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ನ ವಾರ್ಷಿಕ ಮಹಾಸಭೆಯು ಡಿ. 27 ರಂದು ದರ್ಬೆಯಲ್ಲಿರುವ ಸಣ್ಣ ಕೈಗಾರಿಕಾ ಸಹಕಾರ ಸಂಘ ಇದರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಹಿರಿಯ ಸದಸ್ಯರಾದ ಶೀನ ನಾಯ್ಕ ಇವರು ದೀಪ ಪ್ರಜ್ವಲನೆ ಮೂಲಕ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಶಿವಪ್ರಸಾದ್ ಶೆಟ್ಟಿ ವಹಿಸಿದ್ದರು. ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ, ಪಡೀಲ್ ವಿಘ್ನೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಮಾಲಕರಾದ ಸುಧೀರ್ ಶೆಟ್ಟಿ ನೀಡಿದರು..
ಕಾರ್ಯಕ್ರಮದಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.
ನೂತನ ಸಾಲಿನ ಪದಾಧಿಕಾರಿಗಳು:
,ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ತೆಂಕಿಲ. ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಮತ್ತು ಮೋಹನ್ ಗೌಡ, ಕಾರ್ಯದರ್ಶಿಗಳಾಗಿ ಲೀಯೋ ಮಾರ್ಟಿಸ್ ಹಾಗೂ ಖಜಾಂಚಿಯಾಗಿ ಜೈಸನ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಂಗಳೂರಿನ ಶ್ರೀ ಲಕ್ಷ್ಮಿ ಸ್ಟೀಲ್ ಸಂಸ್ಥೆ ಮಾಲಕರಾದ ಕಾಂತ ಕುಮಾರ್ ಮತ್ತು ಯುರೋ ಗಾರ್ಡ್ ಸಂಸ್ಥೆಯ ಯಾದವ್ ಇವರುಗಳು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಟಿ. ವಿ. ರವೀಂದ್ರರವರು ನಡೆಸಿಕೊಟ್ಟರು. ಕಾರ್ಯಕ್ರಮವು ಮಂಗಳೂರಿನ ಶ್ರೀ ಲಕ್ಷ್ಮಿ ಸ್ಟೀಲ್ ಮತ್ತು ಯುರೋ ಗಾರ್ಡ್ ಗಟರ್ ಕಂಪನಿಯ ಪ್ರಾಯೋಜಕತ್ವದಲ್ಲಿ ನಡೆಯಿತು. ಮತ್ತು ಲಕ್ಕಿ ಡ್ರಾ ಮೂಲಕ ಸಂಘದ ಸದಸ್ಯರಿಗೆ ಯಂತ್ರೋಪಕರಣಗಳ ವಿತರಣೆ ಮಾಡಿ, ತಮ್ಮ ಕಂಪನಿಯ ಮೂಲಕ ಲಭ್ಯವಿರುವ ವಿವಿಧ ರೀತಿಯ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಿದರು. ಲೀಯೋ ಮಾರ್ಟಿಸ್ ವಂದಿಸಿದರು. ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಿದರು.