ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ದೇವಳದ ಅಧಿನದಲ್ಲಿದ್ದ ಕಟ್ಟಡವನ್ನು ದ್ವಂಸ ಮಾಡಿದ ಪ್ರಕರಣದ ಆರೋಪದಲ್ಲಿ ರಾಜೇಶ್ ಬನ್ನೂರು ಸಹಿತ 9 ಮಂದಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಈ ಬಗ್ಗೆ ದೇವಸ್ಥಾನದ ಎಕ್ಸ್ ಕ್ಯೂಟಿವ್ ಆಫೀಸರ್ ಕೆ. ವಿ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕೆ. ವಿ. ಶ್ರೀನಿವಾಸ್ ನೀಡಿದ ದೂರಿನಲ್ಲಿ, ದಿನಾಂಕ 05.02.2025 ರ ಮುಂಜಾನೆ 4.00 ಗಂಟೆಗೆ ರಾಜೇಶ್ ಬನ್ನೂರು ಮತ್ತು ಇತರ 9 ಜನ ಕಿಡಿಗೇಡಿಗಳು ದ್ವಂಸ ಮಾಡಿ KA -19-MF 3276 ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಕೇಸು ದಾಖಲಿಸಲಾಗಿದೆ. ಅಲ್ಲದೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರನ್ನು ಉದ್ದೇಶಿಸಿ, ನಿಮಗೆ ತಾಕತ್ತಿದ್ದರೆ ನನ್ನನ್ನು ಹೊರಗೆ ಹಾಕಿ, ಕೋರ್ಟ್ ಕೇಸ್ ಹಾಕಿ, ನೀವು ಹೇಗೆ ಜಾಗವನ್ನು ದೇವಸ್ಥಾನದ ವಶಕ್ಕೆ ಮಾಡುತ್ತೀರಾ ನಾನು ನೋಡ್ತೇನೆ ಎಂದು ಧಮ್ಕಿಹಾಕಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು,ಈ ಬಗ್ಗೆ ದೂರು ದಾಖಲಾಗಿದೆ.