ಕಾಸರಗೋಡು: 35ರ ಮಹಿಳೆಯೋರ್ವರು 14ರ ಬಾಲಕನೊಂದಿಗೆ ಪರಾರಿಯಾದ ಘಟನೆ ಪಾಲ್ಘಾಟ್ ನಲ್ಲಿ ನಡೆದಿದೆ.
ಪಾಲ್ಘಾಟ್ ಆಲತ್ತೂರಿನ ಕುನ್ನಿಕೇರಿ ಕುದಿರಪ್ಪಾರ ನಿವಾಸಿಯಾದ 14ರ ಹರೆಯದ ಬಾಲಕನೊಂದಿಗೆ ಪರಾರಿಯಾಗಿದ್ದಾರೆ.
ಫೆ. 25 ರಂದು ಶಾಲೆಗೆ ಹೋಗಿದ್ದ ಬಾಲಕ ಮರಳಿ ಮನೆಗೆ ಬಂದಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ಮಹಿಳೆಯೊಂದಿಗೆ ಹೋಗಿರುವುದು ತಿಳಿದು ಬಂದಿದೆ. ಆಲತ್ತೂರು ಪೊಲೀಸರು ಬಾಲಕನನ್ನು ಮಹಿಳೆ ಯೊಂದಿಗೆ ಎರ್ನಾಕುಲಂನಿಂದ ಪತ್ತೆ ಹಚ್ಚಿ ಮಹಿಳೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನು ಅಪ್ರಾಪ್ತನಾಗಿರುವುದರಿಂದ ಮಹಿಳೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಈ ಮಹಿಳೆಯು ಪತಿಯಿಂದ ದೂರವಾಗಿದ್ದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನು ಆಕೆಯ 11 ರ ಹರೆಯದ ಮಗನ ಸ್ನೇಹಿತನಾಗಿರುತ್ತಾನೆ ಎಂದು ತಿಳಿದು ಬಂದಿದೆ.