ಪುತ್ತೂರು; ಹಲವು ವರ್ಷಗಳ ಪುತ್ತೂರು ಮೆಡಿಕಲ್ ಕಾಲೇಜಿನ ಕನಸು ಇದೀಗ ನಿಜವಾಗುವ ಸಾಧ್ಯತೆ ಕಂಡುಬರುತ್ತಿದೆ. ನಾಳೆ ನೆಡಯಲಿರುವ ಅಧಿವೇಶನದಲ್ಲಿ ಬಜೆಟ್ ಮಂಡನೆಯಲ್ಲಿ ಬಹುತೇಕ ಪುತ್ತೂರಿನ ಮೆಡಿಕಲ್ ಕಾಲೇಜು ಪ್ರಸ್ತಾಪ ಇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆ ಮೂಲಕ ಪುತ್ತೂರಿನ ದೊಡ್ಡ ಕನಸು ನನಸಾಗಲಿದೆ ಎಂಬ ಆಶಾಭಾವನೆ ಇದೀಗ ಪುತ್ತೂರಿನ ಜನತೆಯಲ್ಲಿ ಕಂಡು ಬಂದಿದೆ.
ಮೆಡಿಕಲ್ ಕಾಲೇಜಿಗೆ 500 ಬೆಡ್‌ಗಳ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತನ್ನ ಬಜೆಟ್ ನಲ್ಲಿ ಅನುದಾನ ನೀಡಲಿದ್ದಾರೆ ಎಂಬ ಭರವಸೆ ಜನತೆಯಿಂದ ವ್ಯಕ್ತವಾಗುತ್ತಿದೆ. ಒಂದು ವೇಳೆ ಬಜೆಟ್ ನಲ್ಲಿ ಈ ಮೆಡಿಕಲ್ ಕಾಲೇಜು ಪ್ರಸ್ತಾಪ ಬಂದರೆ ದೊಡ್ಡ ಕೊಡುಗೆ ಶಾಸಕ ಅಶೋಕ್ ರೈ ಅವರದ್ದಾಗಿದೆ.ಇದರ ಜತೆಗೆ ಮೊತ್ತ ಮೊದಲ ಬಾರಿಗೆ ಈ ಮೆಡಿಕಲ್ ಕಾಲೇಜಿಗೆ ಜಾಗ ಖಾಯ್ದಿರಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮೆಡಿಕಲ್ ಕಾಲೇಜಿಗಾಗಿ ಊರೂರಿಗೆ ಹೋಗಿ ಅಲ್ಲಿ ಜಾಗೃತಿ ಮೂಡಿಸುವ ಮೂಲಕ ಅದನ್ನೊಂದು ಆಂದೋಲವನ್ನಾಗಿಸಿದ ಕೀರ್ತಿ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಸಮಿತಿ ಸದಸ್ಯ ಅಮಲ ರಾಮಚಂದ್ರ ಹಾಗೂ ಅವರು ತಂಡಕ್ಕೆ ಸಲ್ಲುತ್ತದೆ.
ಏನೇ ಇರಲಿ ಜನತೆಯ ದಶಕಗಳ ಕನಸು ಈಡೇರುವ ಹಂತದಲ್ಲಿದೆ. ಬಜೆಟ್ ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಪ್ರಸ್ತಾಪ ಬಹುತೇಕ ಖಚಿತ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ನಾಳೆ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ.ಮಾರ್ಚ್ 3 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. ಮಾರ್ಚ್ ೪ ರಿಂದ ಇಂದಿನವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.ಸಿಎಂ ಸಿದ್ಧರಾಮಯ್ಯ ರಾಜ್ಯದ ಮಟ್ಟಿಗೆ ಅತ್ಯಧಿಕ 16ನೇ ಬಜೆಟ್ ಮಂಡಿಸುವ ದಾಖಲೆ ಬರೆಯಲಿದ್ದಾರೆ. ಮುಖ್ಯಮಂತ್ರಿಯಾಗಿ ಇದು 9ನೇ ಬಜೆಟ್ ಆಗಿದೆ.
ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-2025ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು. ಸಿದ್ದರಾಮಯ್ಯ ಅವರ ೧೬ನೇ ಬಜೆಟ್ ಹಲವು ವೈಶಿಷ್ಠ÷್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎನ್ನಲಾಗಲಿದೆ.