ಉಪ್ಪಿನಂಗಡಿ ನೇತ್ರಾವತಿ ನದಿ ಯಲ್ಲಿ ಶವ ಪತ್ತೆ ನೆನ್ನೆ ರಾತ್ರಿ ನಾಪತ್ತೆ ಇಂದು ನದಿ ಯಲ್ಲಿ ಆಟೋ ಚಾಲಕ ಶವವಾಗಿ ಪತ್ತೆ. ಕಡಬ ತಾಲ್ಲೂಕು ಗೊಳಿತೊಟ್ಟು ನಿವಾಸಿ ಗೋಳಿತೊಟ್ಟು ರವಿಚಂದ್ರ ಅವರ ಪುತ್ರ ಗಗನ್ (19 ವ.) ಮೃತ ಯುವಕ
ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ನಿನ್ನೆ ಬಾಡಿಗೆ ಎಂದು ಮನೆಯಿಂದ ಹೋಗಿದ್ದು, ಇಂದು ಮೃತದೇಹ ಉಪ್ಪಿನಂಗಡಿ ನದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ.