ಪುತ್ತೂರು:ನೀಡಿದ ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಇಲ್ಲಿನ ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್‌ಗೆ ಬ್ಯಾಂಕಿನವರು ಬೀಗ ಜಡಿದು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಶ್ಮಿಯಲ್ಲಿದ್ದ ಬಾರ್ ಆಂಡ್ ರೆಸ್ಟೋರೆಂಟ್, ಬೋರ್ಡಿಂಗ್ ಆಂಡ್ ಲಾಡ್ಜ್, ಇತರ ಅಂಗಡಿ ಮಳಿಗೆ ಮತ್ತು ಹಾಲ್‌ಗಳ ಸಮೇತವಾಗಿ ಇಡೀ ಕಟ್ಟಡಕ್ಕೆ ಬ್ಯಾಂಕಿನವರು ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
31-07-2024ಕ್ಕೆ ಅನ್ವಯವಾಗುವಂತೆ ರೂ.2,83,19,245 ಮತ್ತು ಬಳಿಕದ ಬಡ್ಡಿಯನ್ನು ಮರುಪಾವತಿ ಮಾಡುವಂತೆ ಬ್ಯಾಂಕ್‌ನವರು ನೋಟೀಸ್ ಮಾಡಿದ್ದರೂ ಮರುಪಾವತಿಯಾಗಲಿಲ್ಲ ಎನ್ನುವ ಕಾರಣಕ್ಕಾಗಿ ಬ್ಯಾಂಕಿನವರು ನಿಯಮಾನುಸಾರ ನ್ಯಾಯಾಲಯದ ಮೊರೆ ಹೋಗಿದ್ದರು.ನ್ಯಾಯಾಲಯ ಕೋರ್ಟ್ ಕಮಿಷನರ್ ಅವರನ್ನು ನೇಮಕಗೊಳಿಸಿತ್ತು.ಸಾಲಕ್ಕೆ ಭದ್ರತೆಗಾಗಿ ನೀಡಲಾಗಿದ್ದ ಆಸ್ತಿ ಮುಟ್ಟುಗೋಲು ನಿಟ್ಟಿನಲ್ಲಿ ಬ್ಯಾಂಕಿನವರು ಸಂಬಂಧಿಸಿದವರಿಗೆ (ಸಂತೋಷ್ ಶೆಟ್ಟಿ) ನೋಟೀಸ್ ಜಾರಿ ಮಾಡಿ ಕಟ್ಟಡಕ್ಕೆ ಬೀಗ ಹಾಕಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ .