• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

July 16, 2025
ಸುಲ್ಕೇರಿ ಮೊಗ್ರು  ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ  ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ  ರವರಿಗೆ  ಅಭಿನಂದನೆ ಸಲ್ಲಿಕೆ

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

December 25, 2025
ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಮಂಜೂರು.

December 25, 2025
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಹೋಮ–ಹವನ ಮತ್ತು ವಿಘ್ನಗಳ ನಿವಾರಣೆಗೆ ವಿಘ್ನೇಶ್ವರನ ಪೂಜೆ

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಹೋಮ–ಹವನ ಮತ್ತು ವಿಘ್ನಗಳ ನಿವಾರಣೆಗೆ ವಿಘ್ನೇಶ್ವರನ ಪೂಜೆ

December 25, 2025
ನವ ವಿವಾಹಿತೆ ಮದುವೆಯಾಗಿ ತಿಂಗಳು ಕಳೆಯುವ ಒಳಗೆ ನಿಗೂಢವಾಗಿ ಸಾವು

ನವ ವಿವಾಹಿತೆ ಮದುವೆಯಾಗಿ ತಿಂಗಳು ಕಳೆಯುವ ಒಳಗೆ ನಿಗೂಢವಾಗಿ ಸಾವು

December 25, 2025
ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

December 25, 2025
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

December 25, 2025
ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ  ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

December 24, 2025
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ತೀವ್ರವಾಗಿ ಖಂಡಿಸಿದ ತಸ್ಲಿಮಾ ನಸ್ರೀನ್

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ತೀವ್ರವಾಗಿ ಖಂಡಿಸಿದ ತಸ್ಲಿಮಾ ನಸ್ರೀನ್

December 24, 2025
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

December 24, 2025
ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

December 24, 2025
ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

December 22, 2025
ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

December 22, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, December 25, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸುಲ್ಕೇರಿ ಮೊಗ್ರು  ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ  ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ  ರವರಿಗೆ  ಅಭಿನಂದನೆ ಸಲ್ಲಿಕೆ

    ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

    ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

    ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಮಂಜೂರು.

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

    ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ  ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

    ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

    ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

    ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ  ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

by ಪ್ರಜಾಧ್ವನಿ ನ್ಯೂಸ್
July 16, 2025
in ಪುತ್ತೂರು
0
ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್
5
SHARES
15
VIEWS
ShareShareShare

ಪುತ್ತೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ಯಾರಂಟಿ ಯೋಜನೆಯಲ್ಲಿ ಉಚಿತವನ್ನೂ ಸರಿಯಾಗಿ ಕೊಡದೆ ಅಭಿವೃದ್ಧಿಯು ಶೂನ್ಯವಾಗಿದೆ. ಕಾಂಗ್ರೆಸ್ ಸರಕಾರ ಕೆಲಸ ಮಾಡದ ಗ್ಯಾರಂಟಿ ಸರಕಾರವಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ, ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ನಡೆಯುವ ಪ್ರತಿಭಟನೆಯ ಅಂಗವಾಗಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ಕೆಂಪುಕಲ್ಲು ಹೊಯಿಗೆಯ ಮೇಲೆ ರಾಯಲ್ಟಿ ಧನವನ್ನು ಏರಿಕೆ ಮಾಡಿ ಕಾರ್ಮಿಕರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದೆ.

ಕೆಂಪುಕಲ್ಲು ಹೊಯಿಗೆ ಸಿಗದೆ ಜನರು ಸಂಕಷ್ಟ ಪಡುತ್ತಿದ್ದಾರೆ. ನಮಗೆ ಕಲ್ಲು, ಹೊಯಿಗೆ ಕೊಡಿ. ಕೆಲಸ ಕೊಡಿ. ನಮಗೆ ನಿಮ್ಮ ಉಚಿತಗಳು ಬೇಡ ಎಂದು ಸರಕಾರದ ನೀತಿಗಳನ್ನು ಖಂಡಿಸಿದರು. ಪುತ್ತೂರು ಶಾಸಕರು ಕೂಡ ಪ್ರತಿಭಟನೆಗೆ ಬರಬೇಕಿತ್ತು. ಅವರ ಮೆಡಿಕಲ್ ಕಾಲೇಜು ಕಲ್ಲು ಹೊಯಿಗೆ ಇಲ್ಲದೆ ನಿಂತಿದೆ. ಶಾಲಾ ಮಕ್ಕಳಿಗೆ ನೀಡುವ ಆಹಾರ ಸಾಗಾಟದ ಲಾರಿಗೆ ಬಾಡಿಗೆ ಕೊಡುವ ಯೋಗ್ಯತೆ ಈ ಸರಕಾರಕ್ಕಿಲ್ಲ. ಇಂತಹ ಬೇಜವಾಬ್ದಾರಿ ಸರಕಾರವನ್ನು ಕರ್ನಾಟಕದ ಇತಿಹಾಸದಲ್ಲೇ ನಾನು ನೋಡಲಿಲ್ಲ. ಸರಕಾರದಲ್ಲಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾತ್ರ ಕುರ್ಚಿ ಬಿಟ್ಟುಕೊಡುತ್ತಿಲ್ಲ ಎಂದರು. ಸರಕಾರದಿಂದ ಬೆಲೆಏರಿಕೆಯೇ ಉಚಿತವಾಗಿದೆ. ಸರಕಾರ ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಕಸ ಹೆಕ್ಕುವುದಕ್ಕೂ ತೆರಿಗೆ ಹಾಕುತ್ತಿದೆ. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ 3 ಲಕ್ಷಕ್ಕೂ ಮಿಕ್ಕಿ ಸಾಲ ತೆಗೆದುಕೊಂಡಿದೆ. ಇದೇ ರೀತಿ ಮುಂದುವರೆದರೆ 5 ವರ್ಷದಲ್ಲಿ 10 ಲಕ್ಷ ಕೋಟಿ ಸಾಲ ದಾಟುತ್ತದೆ. ದ.ಕ.ಜಿಲ್ಲೆಯ ಜನರ ಸಮಸ್ಯೆಗೆ ಸರಿಯಾಗಿ ಕಾನೂನು ತರಬೇಕು. ಕಾನೂನು ಇರುವುದು ಜನರಿಗೆ ಗೌರವಯುತವಾಗಿ ಬದುಕು ನಡೆಸಲು. ಕಾನೂನಿನ ಹೆಸರಲ್ಲಿ ಜನರ ಹೊಟ್ಟೆಗೆ ಹೊಡೆಯಬಾರದು ಎಂದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಜನರನ್ನು ಮರುಳು ಮಾಡುತ್ತಿದೆ. ಒಂದು ಕೈಯಲ್ಲಿ ಉಚಿತ ಕೊಟ್ಟು ಇನ್ನೊಂದು ಕೈಯಿಂದ ಭರ್ಜರಿಯಾಗಿ ತಗೊಳ್ಳುತ್ತಿದೆ. ಇದೀಗ ಕೆಂಪು ಕಲ್ಲು, ಮರಳು ಪೂರೈಕೆ ಸ್ಥಗಿತವಾಗುವ ಹಾಗೆ ಮಾಡಿ ಕಾರ್ಮಿಕರ ಬದುಕನ್ನು ನುಚ್ಚುನೂರು ಮಾಡಿದೆ. ನಾವು ಕೋಣನ ಮುಂದೆ ಕಿಣ್ಣರಿ ಬಾರಿಸುವುದಿಲ್ಲ. ದಪ್ಪ ಚರ್ಮದ ಸರಕಾರಕ್ಕೆ ನಮ್ಮ ಕೂಗು ಕೇಳುವವರೆಗೂ ನಮ್ಮ ಹೋರಾಟ ಬಿಡುವುದಿಲ್ಲ ಎಂದರು. ರಾಜ್ಯದ ಮುಖ್ಯಮಂತ್ರಿಯವರು ಸೀಟಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸೀಟಿಗಾಗಿ ಹೋರಾಟ ಮಾಡುತ್ತಿರುವ ಸರಕಾರ ಜನಸಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಇವತ್ತು ದಿವಾಳಿಕೋರ ಸರಕಾರ ಕರ್ನಾಟಕದಲ್ಲಿದೆ. ಬಡವರ ಶೋಷಣೆ ಮಾಡುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಮಾತನಾಡಿ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯಿಂದ ಇದೀಗ ಇಡೀ ಸಮಾಜಕ್ಕೆ ಸಮಸ್ಯೆ ಉಂಟಾಗಿದೆ. ಕರ್ನಾಟಕದಲ್ಲಿ ಸರಕಾರ ಕೆಂಪು ಕಲ್ಲಿಗೆ 295 ರೂ. ಮಾಡಿದ್ದಾರೆ. ಇದರಿಂದ ಎಲ್ಲರಿಗೂ ತೊಂದರೆಯಾಗಿದೆ. ಕೆಂಪು ಕಲ್ಲು ಹಾಗೂ ಮರಳು ಪೂರೈಕೆಯನ್ನು ಸರಳೀಕರಣ ಮಾಡಿ ಎಂದರು. ಬಿಜೆಪಿ ಕಾರ್ಮಿಕರು ಅಕ್ರಮ ಮರಳು, ಕೆಂಪು ಕಲ್ಲು ಸಾಗಾಟವನ್ನು ಎಂದೂ ಬೆಂಬಲಿಸುವುದಿಲ್ಲ. ಸಕ್ರಮವಾಗಿಯೇ ಕೆಲಸ ಮಾಡುತ್ತಿದ್ದಾರೆ. ಸರಕಾರ ಆದಷ್ಟು ಬೇಗ ಜನರ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಪುತ್ತೂರಿನ ಈಗಿನ ಶಾಸಕರು ಕೋಟಿ ಕೋಟಿ ಮಾತನಾಡುತ್ತಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ. ನನ್ನ ಎರಡು ವರ್ಷದ ಅವಧಿಯಲ್ಲಾದ ಅಭಿವೃದ್ಧಿ ಹಾಗೂ ಅವರ ಎರಡು ವರ್ಷದ ಅಭಿವೃದ್ಧಿಯ ಅಂಕಿ ಅಂಶ ನೋಡೋಣ. ಶಾಸಕರ ಗೋಮುಖವನ್ನು ಮಾತ್ರ ನೋಡಿದ್ದೀರಿ. ಆದರೆ ಇತ್ತೀಚೆಗೆ ಅವರು ವ್ಯಾಘ್ರಮುಖವನ್ನು ತೋರಿಸಿ ದರ್ಪ ಮೆರೆದಿದ್ದಾರೆ ಎಂದರು. ಕೆಂಪು ಕಲ್ಲಿಗೆ 96 ರೂ. ಇದ್ದ ರಾಯಲ್ಟಿ ದರವನ್ನು ಸರಕಾರ 295ಕ್ಕೆ ಏರಿಸಿದೆ. ಇದರಿಂದ ಒಂದು ಕೆಂಪು ಕಲ್ಲಿಗೆ 52 ರೂ. ವೆಚ್ಚ ತಗುಲುತ್ತದೆ. ಇದರಿಂದ ಕಲ್ಲು ಕೋರೆಗಳು ಬಂದ್ ಆಗಿ ಕಾರ್ಮಿಕರು ಜೀವನ ನಡೆಸುವುದು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಕ್ರಾಂತಿ ಎಬ್ಬಿಸಲಿದ್ದಾರೆ ಎಂದರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ ಸರಕಾರದ ಕೆಂಪು ಕಲ್ಲು, ಮರಳು ನೀತಿಯಿಂದಾಗಿ ಬಡ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟ. ಇದರಿಂದ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಸಿಮೆಂಟ್ ಮಾರಾಟವಿಲ್ಲದೆ ಅಂಗಡಿಗಳಲ್ಲಿ ಸಿಮೆಂಟ್ ಗಟ್ಟಿಯಾಗಿ ಕಲ್ಲಿನ ರೀತಿಯಾಗಿದೆ ಎಂದರು. ನದಿಗಳಿಂದ ಹೊಯಿಗೆ ತೆಗೆದರೆ ನೀರು ಬತ್ತಿ ಹೋಗುವುದಿಲ್ಲ ನೀರಿನ ಹರಿವು ಹೆಚ್ಚುತ್ತದೆ ಎಂದು ಹೇಳಿದ ಅವರು ಈ ಹೋರಾಟವನ್ನು ನಿಲ್ಲಿಸದೆ ನ್ಯಾಯ ಸಿಗುವವರೆಗೆ ಮುಂದುವರೆಸಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಬಿಜೆಪಿ ಸರಕಾರದಿಂದ ರಾಷ್ಟ್ರ, ರಾಜ್ಯದಲ್ಲಿ ಅಲ್ಲದೆ ಪುತ್ತೂರಿನಲ್ಲಿಯೂ ಅಭಿವೃದ್ಧಿಯಾಗಿದೆ. ನಮ್ಮ ಅಂಕಿ ಅಂಶ ಮತ್ತು ಕಾಂಗ್ರೆಸ್ ಸರಕಾರದ ಅಂಕಿ ಅಂಶ ತುಲನೆ ಮಾಡಿದರೆ ಇದು ಗೊತ್ತಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರ ರಾಜ್ಯದ ಚಿತ್ರಣವನ್ನು ಹಾಳು ಮಾಡಿದೆ. ಇದು ಜನವಿರೋಧಿ, ಬಡವರ ವಿರೋಧಿ ಸರಕಾರವಾಗಿದೆ ಎಂದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಕೋರ್ಟ್ ರೋಡ್ ಮೂಲಕ ಅಮರ್ ಜವಾನ್ ಸ್ಮಾರಕದವರೆಗೆ ನಡೆದು ಅಲ್ಲಿ ಪ್ರತಿಭಟನೆ ನಡೆಯಿತು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಸರಕಾರಕ್ಕೆ ಸಲ್ಲಿಸಲಿರುವ ಮನವಿ ಓದಿದರು. ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು ವಂದಿಸಿದರು. ಬಿಜೆಪಿ ಮುಖಂಡರಾದ ಎಸ್. ಅಪ್ಪಯ್ಯ ಮಣಿಯಾಣಿ, ಬಂಗಾರಡ್ಕ ವಿಶ್ವೇಶ್ವರ ಭಟ್, ರಾಧಾಕೃಷ್ಣ ಬೋರ್ಕರ್, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಶಶಿಕುಮಾರ್ ರೈ ಬಾಲ್ಯೊಟ್ಟು ಒಬಿಸಿ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಚಂದ್ರಶೇಖರ ರಾವ್ ಬಪ್ಪಳಿಗೆ, ವಿದ್ಯಾ ಆರ್. ಗೌರಿ, ಬೂಡಿಯಾರ್ ರಾಧಾಕೃಷ್ಣ ರೈ, ಸುರೇಶ್ ಆಳ್ವ, ಗೌರಿ ಬನ್ನೂರು, ಕರುಣಾಕರ ಗೌಡ ಎಲಿಯ, ಗ್ರಾಮಾಂತರ ಮಂಡಲ ಯುವಮೋರ್ಛಾ ಅಧ್ಯಕ್ಷ ಶಿಶಿರ್ ಪೆರುವೋಡಿ, ನಗರ ಮಂಡಲ ಯುವಮೋರ್ಛಾ ಅಧ್ಯಕ್ಷ ನಿತೇಶ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ಗ್ರಾಮಾಮತರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಯಶೋಧಾ ಕೆ. ಗೌಡ, ನಗರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಜೈಭಾರತ್ ಸಂಘದ ಮಾಜಿ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ಸೇರಿದಂತೆ ಹಲವು ಮುಖಂಡರು, ನಗರಸಭಾ ಬಿಜೆಪಿ ಸದಸ್ಯರು, ಬಿಜೆಪಿ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆಂಪು ಕಲ್ಲು, ಮರಳು ಅಭಾವವನ್ನು ಶೀಘ್ರ ಪರಿಹರಿಸುವಂತೆ ಬಿಜೆಪಿ ವತಿಯಿಂದ ತಹಶೀಲ್ದಾರ್‌ರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಉಪತಹಶೀಲ್ದಾರ್ ಸುಲೋಚನಾರವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

camera center ad

ಜಾಹೀರಾತು

SendShare2Share
Previous Post

ಲಾರಿ ಚಾಲಕನ ನಿರ್ಲಕ್ಷ್ಯ:ಪುತ್ತೂರು ನಗರಸಭಾ ಚರಂಡಿ ಸ್ಲ್ಯಾಬ್ ಮುರಿತ.

Next Post

ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..