ಮಂಗಳೂರು: ಬೇರೆಯವರ ಜೊತೆಗಿದ್ದ ಪತ್ನಿಯ ಖಾಸಗಿ ವೀಡಿಯೋ ಸೆರೆ ಹಿಡಿದು, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹತ್ತಾರು ಜನರ ಜೊತೆ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ ಘಟನೆಯೊಂದು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತೆಗೆ ಮದುವೆಯಾಗಿ ಕೆಲ ವರ್ಷಗಳೇ ಆಗಿತ್ತು. ತನ್ನ ಪತ್ನಿ ಬೇರೆಯವರ ಜೊತೆಗಿದ್ದ ಖಾಸಗಿ ವಿಡಿಯೋವನ್ನು ಸ್ವತಃ ಗಂಡನೇ ಸೆರೆಹಿಡಿದಿದ್ದ. ಬಳಿಕ ಈ ವೀಡಿಯೋ ತೋರಿಸಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಜೊತೆಗೆ ತಾನು ಹೇಳಿದವರ ಜೊತೆ ಮಲಗಬೇಕು ಎಂದು ಟಾರ್ಚರ್ ಕೊಟ್ಟಿದ್ದ. ಅದಲ್ಲದೇ ಹತ್ತಾರು ಜನರ ಜೊತೆ ಸೆಕ್ಸ್‌ಗಾಗಿ ಪತ್ನಿಯನ್ನು ಕಳಿಸಿದ್ದ. ಇದರಿಂದ ನೊಂದಿದ್ದ ಪತ್ನಿ ಪೊಲೀಸರ ಸಹಾಯ ಕೋರಿದ್ದಳು. ಈ ವೇಳೆ ಯಾರದ್ದೋ ಮೂಲಕ ಪರಿಚಯ ಆಗಿದ್ದ ಕಾವೂರು ಪೊಲೀಸ್ ಪೇದೆ ಚಂದ್ರಾನಾಯಕ್ ಬಳಿ ವೀಡಿಯೋ ಡಿಲೀಟ್ ಮಾಡಿಸುವಂತೆ ಮನವಿ ಮಾಡಿದ್ದಳು.
ತನ್ನ ಪೊಲೀಸ್ ಪವರ್ ಬಳಸಿ ಕಾನ್‌ಸ್ಟೇಬಲ್ ವಿಡಿಯೋ ಡಿಲೀಟ್ ಮಾಡಿಸಿದ್ದ. ಬಳಿಕ ಗಂಡ-ಹೆಂಡತಿ ನಡುವೆ ರಾಜಿ ಕೂಡ ಮಾಡಿಸಿದ್ದ. ಇದಾದ ಬಳಿಕ ಸಂತ್ರಸ್ತೆ ಪತಿಯ ಸಹಕಾರ ಪಡೆದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪದೇ ಪದೇ ಮಹಿಳೆ ಬಳಿ ಹೋಗಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡಿದ್ದ. ಬಳಿಕ ಆಕೆಯ ಪತಿಗೆ ಸಪೋರ್ಟ್ ಕೊಟ್ಟು ಹಳೆ ಚಾಳಿ ಮುಂದುವರೆಸಲು ಸಹಕರಿಸಿದ್ದ. ಇದರಿಂದ ದಾರಿಕಾಣದೆ ಸಂತ್ರಸ್ತೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೊರೆ ಹೋಗಿದ್ದಳು. ತನ್ನ ಗಂಡನೇ ತನ್ನ ನಗ್ನ ವಿಡಿಯೋ ಮಾಡಿಟ್ಟು ಬೆದರಿಸುತ್ತಿದ್ದ. ಆಗ ಪೊಲೀಸ್ ಪೇದೆ ಗಂಡನನ್ನ ಠಾಣೆಗೆ ಕರೆಸಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಬಳಿಕ ನನ್ನ ಅಸಾಹಕತೆಯನ್ನ ದುರ್ಬಳಕೆ ಮಾಡಿ ಅತ್ಯಾಚಾರ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ.
ಮಹಿಳೆ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಪೇದೆ ಚಂದ್ರನಾಯಕ್ ಹಾಗೂ ಸಂತ್ರಸ್ತೆಯ ಪತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.