ಬೆಳ್ತಂಗಡಿ :ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಜುಲೈ 26 ರಂದು ವೀರ ಯೋಧರಿಗೊಂದು ನಮನ ಕಾರ್ಯಕ್ರಮದ ಸಲುವಾಗಿ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ಥಳಿಗೆ ಗೌರವ ನಮನ ಹಾಗೂ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯೋಧ ಏಕನಾಥ್ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ,ಮಗ ಅಕ್ಷಯ್, ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಗಣೇಶ್. ಆರ್. ಲಾಯಿಲ, ಹರೀಶ್ ಗೌಡ ಸಂಭೋಲ್ಯ ಗೇರುಕಟ್ಟೆ, ಕಾರ್ಯದರ್ಶಿ ಗಿರೀಶ್ ಗೌಡ. ಬಿ.ಕೆ. ಬಂದಾರು, ಸದಸ್ಯರಾದ ಪ್ರಸಾದ್ ಸುದೆಮುಗೇರು, ಜಗದೀಶ್ ಕನ್ನಾಜೆ ಲಾಯಿಲ, ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಹ ಸಂಚಾಲಕರಾದ ಲೋಕ್ಷತ್ ಗೌಡ ಬೈಪಾಡಿ ಇವರುಗಳು ಉಪಸ್ಥಿತರಿದ್ದರು.



                                









			










