ನರಿಮೊಗ್ರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ನರಿಮೊಗ್ರು ಮತ್ತು ಶಾಂತಿಗೋಡು ಶಕ್ತಿಕೇಂದ್ರದ ಪದಾಧಿಕಾರಿಗಳ ಹಾಗೂ ಪ್ರಮುಖರ ಪ್ರಶಿಕ್ಷಣ ವರ್ಗವು ನಡೆಯಿತು.
ಈ ಪ್ರಶಿಕ್ಷಣ ವರ್ಗವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಉಪಸ್ಥಿತಿಯಲ್ಲಿ ಮೋನಪ್ಪ ಪುರುಷ
ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಉಜಿರೆಮಾರು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಪಂಜಾಳ,ಪಂಚಾಯತ್ ಸದಸ್ಯರು,ನರಿಮೋಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಡಿ,ಉಪಾಧ್ಯಕ್ಷೆ ಪವಿತ್ರ, ನಿರ್ದೇಶಕರು, ಶಕ್ತಿಕೇಂದ್ರ ಅಧ್ಯಕ್ಷರು,ಬೂತ್ ಅಧ್ಯಕ್ಷರು, ಕಾರ್ಯದರ್ಶಿ,ಸುಳ್ಯ ಮಂಡಲ ಉಪಾಧ್ಯಕ್ಷ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಮಂಡಲ ಉಪಾಧ್ಯಕ್ಷ ಸುನೀಲ್ ದಡ್ಡು, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಶತೀಶ್ ಪಂಬಾರ್,ಅಭ್ಯಾಸವರ್ಗ ಪ್ರಭಾರಿ ಬುಡಿಯಾರ್ ರಾಧಾಕೃಷ್ಣ ರೈ, ಶಕ್ತಿ ಕೇಂದ್ರದ ಅಧ್ಯಕ್ಷ ವಿಶ್ವನಾಥ ಬಾಲ್ಯಯ್ಯ ಉಪಸ್ಥಿತರಿದ್ದರು.