ಬೆಳ್ತಂಗಡಿ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ, ಲಾಯಿಲ 2025,2026ನೇ ಸಾಲಿನಲ್ಲಿ 1 ನೇ ತರಗತಿಯಿಂದ ಆಂಗ್ಲ ಮಾದ್ಯಮ ತರಗತಿಯನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ದೊರಕಿಸಿ ಕೊಡುವಂತೆ ತಾಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜಾ ಇವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಗಂಧಿ ಜಗನ್ನಾಥ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್. ಆರ್. ಉಪಾಧ್ಯಕ್ಷರಾದ ಅನಿಲ್ ಕಕ್ಕೇನ, ಸದಸ್ಯರಾದ ಪವನ್ ಗಾಂಧಿನಗರ, ರಮ್ಯಾ ಪುತ್ರಬೈಲ್, ಮುಷ್ತಾಕ್ ಕಾಶಿಬೆಟ್ಟು, ಅಶ್ರಫ್ ಮಾಂಜಾಲ್ S.D.M.C ಸದಸ್ಯರಾದ. ಶ್ರೀಮತಿ ಚಂದ್ರಾವತಿ, ಶ್ರೀಮತಿ ಸಮಿಯಾ, ಶ್ರೀಮತಿ ತಸ್ರಿಫಾ ಉಪಸ್ಥಿತರಿದ್ದರು.