ಧಾರ್ಮಿಕ ಗ್ರಂಥಗಳ ಪ್ರಕಾರ, ಹನುಮಂತನನ್ನು ಪೂಜಿಸುವುದರಿಂದ ವ್ಯಕ್ತಿಯು ರೋಗಗಳು, ದೋಷಗಳು ಮತ್ತು ಭಯದಿಂದ ಮುಕ್ತನಾಗುತ್ತಾನೆ. ಹನುಮಂತನನ್ನು ಪೂಜಿಸುವಾಗ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹನುಮಾನ್ ಚಾಲೀಸಾದ ಪ್ರತಿಯೊಂದು ಪ್ಯಾರಾಗಳು ತುಂಬಾನೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ ಮತ್ತು ಅದನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ. ಇಂದು ನಾವು ಹನುಮಾನ್ ಚಾಲೀಸಾದ 5 ಪವಾಡದ ಸಾಲುಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ.
ಭೂತ್ -ಪಿಶಾಚ್ ನಿಕಟ್ ನಹಿ ಆವೇ, ಮಹಾಬೀರಾ ಜಬ್ ನಾಮ ಸುನಾವೆ. ಹನುಮಾನ್ ಚಾಲೀಸಾದ ಈ ಸಾಲುಗಳು ತುಂಬಾನೆ ಅದ್ಭುತವಾಗಿವೆ.. ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೇ ಭಯದಿಂದ ಬಳಲುತ್ತಿದ್ದರೆ, ಅವನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಬೇಕು ಎಂದು ಹೇಳಲಾಗುತ್ತದೆ. ಈ ಸಾಲುಗಳನ್ನು ಪಠಿಸುವುದರಿಂದ ಎಲ್ಲಾ ಭಯಗಳು ದೂರವಾಗುತ್ತವೆ.
ನಾಸೇ ರೋಗ್ ಹರೇ ಸಬ್ ಪೀರಾ. ಜೋ ಸುಮಿರೇ ಹನುಮಂತ್ ಬಲ್ ಪೀರಾ. ಒಬ್ಬ ವ್ಯಕ್ತಿಯು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅವನು ನಿಯಮಿತವಾಗಿ ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಬೇಕು. ಈ ಮಂತ್ರವು ವ್ಯಕ್ತಿಯನ್ನು ಎಲ್ಲಾ ರೋಗಗಳಿಂದ ಮುಕ್ತಗೊಳಿಸುತ್ತದೆ ಮತ್ತು ಅವನನ್ನು ಆರೋಗ್ಯವಂತನನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ.
ಅಷ್ಟ-ಸಿದ್ಧಿ ನವನಿಧಿ ಕೆ ದಾತಾ. ಅಸ್ ಬರಾ ದೀನಾ ಜಾನಕೀ ಮಾತ. ಹನುಮಾನ್ ಚಾಲೀಸಾದ ಈ ಸಾಲುಗಳು ಸಹ ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಹನುಮಂತನನ್ನು ಎಂಟು ಸಿದ್ಧಿಗಳು ಮತ್ತು ಒಂಬತ್ತು ನಿಧಿಗಳನ್ನು ನೀಡುವ ದೇವರು ಎಂದು ಹೇಳಲಾಗುತ್ತದೆ. ಈ ವರವನ್ನು ಮಾತಾ ಸೀತಾ ಸ್ವತಃ ಹನುಮಂತನಿಗೆ ನೀಡಿದ್ದಾರೆ. ಈ ಸಾಲುಗಳನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಮಾನಸಿಕ ಶಕ್ತಿಯನ್ನು ಪಡೆಯುತ್ತಾನೆ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕತೆ ಬರುತ್ತದೆ.
ಬಿದ್ಯಾಬಾನು ಗುಣ್ ಅತಿ ಚಾತುರ್, ರಾಮ್ ಕಾಜ್ ಕರಿಬೇ ಕೋ ಆತುರ್. ಒಬ್ಬ ವ್ಯಕ್ತಿಯು ಜ್ಞಾನ, ಬುದ್ಧಿವಂತಿಕೆ, ಶಕ್ತಿ, ವಿವೇಚನೆ ಮತ್ತು ಸಂಪತ್ತನ್ನು ಪಡೆಯಲು ಬಯಸಿದರೆ, ಅಂತವರು ಕಠಿಣ ಪರಿಶ್ರಮದ ಜೊತೆಗೆ ಹನುಮಾನ್ ಚಾಲೀಸಾದ ಈ ಶ್ಲೋಕವನ್ನು ಪಠಿಸಬೇಕು. ಈ ಶ್ಲೋಕವನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಜ್ಞಾನದ ಜೊತೆಗೆ ಬುದ್ಧಿವಂತಿಕೆಯನ್ನು ಪಡೆಯುತ್ತಾನೆ.
ಭೀಮ್ ರೂಪ್ ಧರಿ ಅಸುರ ಸಂಹಾರೇ. ರಾಮಚಂದ್ರಜೀ ಕೆ ಕಾಜ್ ಸಂವಾರೇ. ಹನುಮಂತನಿಂದ ಆಶೀರ್ವಾದ ಪಡೆದ ವ್ಯಕ್ತಿಗೆ ಭಗವಾನ್ ರಾಮನ ಆಶೀರ್ವಾದವೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹನುಮಂತನ ಆಶೀರ್ವಾದವನ್ನು ಪಡೆಯಲು ಮತ್ತು ಅವರನ್ನು ಮೆಚ್ಚಿಸಲು ಬಯಸಿದರೆ, ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸುವುದು ಬಹಳ ಫಲಪ್ರದವಾಗುತ್ತದೆ. ಈ ಸಾಲುಗಳನ್ನು ಪಠಿಸುವುದರಿಂದ ಶತ್ರುಗಳು ದೂರವಾಗುತ್ತಾರೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.