ಬೆಳಾಲು : ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ಮಹಿಳಾ ಸಮಿತಿ ಹಾಗೂ ವರಮಹಾಲಕ್ಷ್ಮಿ ಸಮಿತಿ ಇದರ ನೇತೃತ್ವದಲ್ಲಿ 11ನೇ ವರ್ಷದ ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ 08 ರಂದು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನೆರವೇರಿತು. ದುರ್ಗಾ ಪ್ರಸಾದ್ ಕೆ ಕೆಮ್ಮಣ್ಣಾಯ ಗಿರೀಶ್ ಬಾರಿತ್ತಾಯ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು ಆಡಳಿತ ಮೋಕ್ತೆಸರರು, ಅಸ್ರಣ್ಣರು,ದೇವಸ್ಥಾನ, ಮಹಿಳಾ ಸಮಿತಿ ಭಜನಾ ಮಂಡಳಿಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಸರ್ವ- ಸದಸ್ಯರು ಹಾಗೂ ಊರ ಭಕಕ್ತಾಭಿಮಾನಿಗಳು ಭಾಗವಹಿಸಿದ್ದರು.
























