ಬೆಳ್ತಂಗಡಿ ಅಗಸ್ಟ್ 16: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ತನಿಖೆ ಮುಂದುವರೆಯುತ್ತಿದ್ದಂತೆ ಇದೀಗ ಧರ್ಮಸ್ಥಳ ಗ್ರಾಮ ಪಂಚಾಯಿತಿಯವರು 1987ರಿಂದ 2025 ಮಾರ್ಚ್‌ವರೆಗೆ ಒಟ್ಟು 279 ಅನಾಥ ಶವಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಆರ್ ಟಿಐ ಮೂಲಕ ತಿಳಿದು ಬಂದಿದೆ.
ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕೆ ಆರ್ ಟಿಐ ಮೂಲಕ ಕೇಳಿದ ಮಾಹಿತಿಗೆ ಉತ್ತರಿಸಿದ ಗ್ರಾಮಪಂಚಾಯತ್ 1987ರಿಂದ 2025ರ ಅವಧಿಯಲ್ಲಿ, ಗುರುತು ಪತ್ತೆಯಾಗದ 279 ಮೃತದೇಹಗಳಲ್ಲಿ 219 ಗಂಡು, 46 ಹೆಣ್ಣಿನ ಶವಗಳು. 13 ಮೃತದೇಹಗಳ ಲಿಂಗ ಪತ್ತೆಯಾಗಿಲ್ಲ. ಒಂದು ನವಜಾತ ಶಿಶು’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಪಂಚಾಯಿತಿಯ ಮಾಹಿತಿ ಅಧಿಕಾರಿ ಉತ್ತರಿಸಿದ್ದಾರೆ.
ಅಲ್ಲದೆ 2003–04, 2006–07, 2014–15ನೇ ಸಾಲಿನಲ್ಲಿ ಅತಿ ಹೆಚ್ಚು (ತಲಾ 17) ಮೃತದೇಹಗಳು 2009–10, 2011–12ರಲ್ಲಿ ತಲಾ 13 ಹಾಗೂ 1990–91, 2005–06, 2007–08, 2018–19 ಹಾಗೂ 2023–24ರಲ್ಲಿ ತಲಾ 12, 2008–09 ಮತ್ತು 2022–23ರಲ್ಲಿ ತಲಾ 11 ಹಾಗೂ 2020–21ರಲ್ಲಿ 10 ಮೃತದೇಹಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇ ಮಾಡಲಾಗಿದೆ. 16 ವರ್ಷಗಳಲ್ಲಿ ತಲಾ 10ಕ್ಕೂ ಹೆಚ್ಚು ಮೃತದೇಹಗಳನ್ನು ವಿಲೇ ಮಾಡಲಾಗಿದೆ.