ಅಗಸ್ಟ್ 24 ರಂದು ಪುತ್ತೂರಿನ ರಾಘವೇಂದ್ರ ಮಠ ಕಲ್ಲಾರೆ ಯಲ್ಲಿ ನಡೆದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕಾರ್ಯಕ್ರಮವನ್ನು ಹಿರಿಯರಾದ ಪೂವಪ್ಪ ಇವರ ಆಶೀರ್ವಾದದೊಂದಿಗೆ ಬಿಡುಗಡೆಗೊಳಿಸಲಾಯಿತು ಈ ಸಂದರ್ಭದಲ್ಲಿ ಧರ್ಮ ಚಾವಡಿ ಚಿತ್ರದ ನಿರ್ಮಾಪಕರಾದಂತಹ ಜಗದೀಶ್ ಅಮೀನ್ ನಡು ಬೈಲು, ಮಾಯಿ ಕಿರು ಚಿತ್ರದ ನಿರ್ಮಾಪಕರಾದ ಅಜಿತ್ ಬಿ ಟಿ , ಸುಶಾಂತ್ ಆಚಾರ್ಯ, ಪ್ರಮಿತ್ ರಾಜ್ ಕಟ್ಟತ್ತಾರು, ಪ್ರಮೀಳಾ ಶೆಟ್ಟಿ , ಗಣೇಶ್ ಇವರು ಉಪಸ್ಥಿತಿಯಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ನಟ ಚೇತನ್ ರೈ ಮಾಣಿ ಇವರು ಚಿತ್ರಕ್ಕೆ ಶುಭ ಹಾರೈಕೆಯನ್ನು ಮಾಡಿದರು . ಅದೇ ರೀತಿ ಚಿತ್ರದ ನಿರ್ದೇಶಕರಾದಂತಹ ರವಿಚಂದ್ರ ರೈ ಮುಂಡೂರು ಇವರು ಪ್ರಾಸ್ತಾವಿಕ
ಮಾತುಗಳ ನಾಡಿದರು ಈ ಸಂದರ್ಭದಲ್ಲಿ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞಾನರು ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಚಿತ್ರದ ನಾಯಕಿ ಶ್ರೇಯಾ ಸುಳ್ಯ ಇವರು ನಿರೂಪಿಸಿದರು.
ಚಿತ್ರದಲ್ಲಿ ಪ್ರಮುಖವಾಗಿ ಚಲನಚಿತ್ರರಂಗದ ಪ್ರಖ್ಯಾತ ನಟರಾದ ದೀಪಕ್ ರೈ ಪಾಣಾಜೆ ,ಚೇತನ್ ರೈ ಮಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .
ಷಣ್ಮುಖ ಪ್ರಸಾದ್ ಛಾಯಾಗ್ರಾಹಕರಾಗಿ ,
ಮ್ಯೂಸಿಕ್ ಡೈರೆಕ್ಟರ್ ಆಗಿ ನಿಶ್ಚಿತ್ ರಾಜ್ ಹಾಗೂ ಪೋಸ್ಟರ್ ಸಂಕಲನದಲ್ಲಿ ಪ್ರಸನ್ನ ರೈ , ಹಾಗೂ ಚಿತ್ರದ ಸಂಕಲನವನ್ನು ಸಾಯಿ ಚರಣ್ ರೈ
ನಿರ್ದೇಶನ ವಿಭಾಗದಲ್ಲಿ ಹೃದಯಿ , ಕೀರ್ತನ್ ಶೆಟ್ಟಿ ಸುಳ್ಯ, ಅಶ್ವಥ್ , ಪ್ರವೀಣ್ ಕಾರ್ಯನಿರ್ವಹಿಸಿದ್ದಾರೆ .
https://www.instagram.com/reel/DNxsqBoUvn8/?utm_source=ig_web_copy_link&igsh=YmtmZ3d2djNjc29o