ಉಪ್ಪಿನಂಗಡಿ : ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಆಗಮಿಸುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ ನೀಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿನತ್ತ ಖಾಸಗಿ ಬಸ್ ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಸಹಪ್ರಯಾಣಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಯುವತಿ ರಕ್ಷಣೆಗಾಗಿ ಬಸ್ ಚಾಲಕನ ಮೊರೆ ಹೋದ ವೇಳೆ ಯಾವುದೇ ಸ್ಪಂದನೆ ದೊರೆಯದಿದ್ದು, ಬಳಿಕ ಯುವತಿ ಯುವಕನ ಮೇಲೆ ಪ್ರತಿರೋಧಯೊಡ್ಡಿ ಆತನಿಂದ ಆಧಾರ್ ಕಾರ್ಡ್ ಕಿತ್ತುಕೊಂಡಿದ್ದು, ಯುವಕ ಬಸ್ ನಿಧನವಾಗುತ್ತಿದ್ದಂತೆ ಬಸ್ ಕಿಟಕಿಯಿಂದ ಹೊರ ಜಿಗಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಆಧಾರ್ ಕಾರ್ಡ್ ನಲ್ಲಿ ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಇಬ್ರಾಹಿಂ ಎಂಬವರ ಮಹಮ್ಮದ್ ಅಜೀಂ ಎಂಬ ಮಾಹಿತಿ ಇದ್ದು, ಈ ಬಗ್ಗೆ ಯುವತಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಂಗಳೂರು ದಕ್ಷಿಣ ಬಿಜೆಪಿ ಕಾರ್ಯದರ್ಶಿ ರಕ್ಷಿತ್ ಕೊಟ್ಟಾರಿ, ಮುಖಂಡರುಗಳಾದ ಅಜಿತ್ ಬೋಪಾಯ್ಯ, ಅಭಿಷೇಕ್ ರೈ ಹಾಗೂ ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.