ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರ ಪಾಲಿಕೆ,MY Bharat ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ (ರಿ.)ಹಾಗೂ ವಿವಿಧ ಸಂಘ ಸಂಸ್ಥೆಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ 07 ರಂದು ಮಂಗಳಾ ಕ್ರೀಡಾಂಗಣ ಮಂಗಳೂರು ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2025-26 ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕು ತಂಡ ಪ್ರಥಮ ಸ್ಥಾನ ಪ್ರಶಸ್ತಿ ಪಡೆದು ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಈ ತಂಡದಲ್ಲಿ ತಂಡದ ನಾಯಕ ಅಭಿಶ್ರುತ್ ಮುರ ಇಳಂತಿಲ, ವಿಜೇತ್ ಕುಲಾಲ್ ಬಂದಾರು, ಭರತೇಶ್ ಗೌಡ ಬಂದಾರು,ಜಿತೇಶ್ ಕುಲಾಲ್ ಬಂದಾರು, ಅಸಾದ್, ಅನೂಪ್, ಚರಣ್, ಉದಿತ್, ಜಾನು ಪ್ರಕಾಶ್, ಪ್ರಜ್ವಲ್ ಪಿ. ಎಲ್ ಹಾಗೂ ಸುರಕ್ಷಿತ್ ಕುಲಾಲ್ ಬಂದಾರು ಕೋಚಿಂಗ್ ನೀಡಿದರು.