ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ಕಲಹದಿಂದಾಗಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಯುವಜನರ ಆಕ್ರೋಶದ ಬೆಂಕಿಗೆ ದೇಶದ ಪ್ರಧಾನಿಯೇ ದೇಶ ಬಿಟ್ಟು ಓಡುವಂತಾಗಿದೆ. ಅಷ್ಟಕ್ಕೂ ಅಲ್ಲಿ ಆಗ್ತಿರೋದೇನು? ನೇಪಾಳದ ಈ ಸ್ಥಿತಿಗೆ ಕಾರಣವೇನು ಅನ್ನೋದರ ಕುರಿತಾಗಿ ಇಂದಿನ ಅತಿಥಿ ಅಂಕಣದಲ್ಲಿ ಶ್ರೀ ಧ್ರುವ ಜತ್ತಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನೇಪಾಳ ದೇಶದ ಯುವಕರು ಸಂಸತ್ತಿಗೆ ಬೆಂಕಿ ಹಚ್ಚುವುದು, ಸಚಿವರನ್ನು ಮನೆಗಳಿಂದ ಹೊರಗೆಳೆದು ಬೀದಿಗಳಲ್ಲಿ ಒದೆಯುವ ಚಿತ್ರಗಳನ್ನು ನೀವು ನೋಡಿರಬಹುದು, ನೋಡದಿದ್ದರೆ ತಪ್ಪದೇ ನೋಡಿ. ಆಳವಾಗಿ ಬೇರೂರಿರುವ ಭ್ರಷ್ಟಾಚಾರವು ತಮ್ಮ ದೇಶವನ್ನು ನಾಶಪಡಿಸುತ್ತಿರುವದನ್ನು ಇನ್ನು ಮುಂದಕ್ಕೆ ಸಹಿಸಲು ಸಿದ್ಧರಿಲ್ಲದ ಈ ಯುವ ಪೀಳಿಗೆಯ ರೋಷ, ಕೋಪ ಈ ದೃಶ್ಯಗಳಲ್ಲಿ ಕಂಡುಬರುತ್ತವೆ.
ನೇಪಾಳದ ರಾಜಧಾನಿಯಲ್ಲಿ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಉಲ್ಬಣಗೊಂಡು, ಪ್ರತಿಭಟನಾಕಾರರಲ್ಲಿ ವರ್ಷಗಳಿಂದ ತುಂಬಿದ್ದ ಕೋಪ ಮತ್ತು ನಿರಾಶೆ ಭುಗಿಲೆದ್ದಿರುವದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೆಲವು ದಿನಗಳ ಹಿಂದೆ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ಸರ್ಕಾರದ ನಿಷೇಧವು ಈ ಬೆಂಕಿಯನ್ನು ಹೊತ್ತಿಸಿದೆ.
ನೇಪಾಳದ ಇಂದಿನ ಯುವಕರು ಅಂದರೆ GEN Z ಎಂದು ಘೋಷಿಸಿಕೊಂಡ ಪ್ರತಿಭಟನಾಕಾರರು, ಸೋಮವಾರ ಬೀದಿಗಳಲ್ಲಿ ಕಳೆದ 10 ವರ್ಷಗಳಲ್ಲಿ ನೇಪಾಳವನ್ನು ಬಾಧಿಸುತ್ತಿರುವ ದೀರ್ಘಕಾಲೀನ ಸಾಮಾಜಿಕ ಮತ್ತು ಭ್ರಷ್ಟಾಚಾರದ ಸಮಸ್ಯೆಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಿರುವದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ನೇಪಾಳದಲ್ಲಿ ಯುವಕರ ದಳ್ಳುರಿ, ಗೆದ್ದ ನಂತರ ಮೈ ಮರೆತು ಶ್ರೀಮಂತ ಉದ್ಯಮಿಗಳಿಗೆ ಮಾತ್ರ ನೆರವು ಆಗುವ, ಭಾರತದ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆ. ಭಾರತದ ರಾಜಕೀಯ ವ್ಯವಸ್ಥೆ ಈಗ ಉದ್ಯಮಿಗಳ ಕೈಯಲ್ಲಿ ಇದ್ದು ಭಾರತದ ಅರ್ಥ ವ್ಯವಸ್ಥೆ ಯನ್ನೇ ಬುಡಮೇಲು ಗೊಳಿಸಿ ಅಭಿವೃದ್ಧಿಯಲ್ಲಿ ಇದೆ ಎಂಬ ಸುಳ್ಳು ಸುದ್ದಿಯಾನ ಮಾಡುತಿರುವ ರಾಜಕಾರಣಿಗಳಿಗೆ ನೇಪಾಳ ಮಾಡೆಲ್ ಆದ್ರೆ ಇಲ್ಲಿ ದೇವೆರೆ ಗತಿ.
ದೇಶ ದಲ್ಲಿ ಉದ್ಯೋಗ ವನ್ನೇ 100 ಜನರಿಂದ ಕಸಿದು ಒಬ್ಬರಿಗೆ ಹಂಚುವ ಡಿಜಿಟಲ್ ಮಾಡಿ ಜೇರೆಕ್ಸ್ ಅಂಗಡಿ , ಟೈಪಿಂಸ್ಟ್ ಗಳಿಗೆ, ಫೋಟೋ ಸ್ಟುಡಿಯೋಗಳಿಗೆ ಇನ್ನಿತರ ಉದ್ಯಮಗಳನ್ನು ನಾಶ ಮಾಡಿದ ಕೀರ್ತಿ ದೇಶದ ಉನ್ನತ ರಾಜಕಾರಣಿಗೆ ಸಲ್ಲೂತದೆ. ಗ್ಯಾರಂಟಿ ಗಳು ಕೂಡ ಅಭಿವೃದ್ಧಿ ಕುಂಟಿತ್ತಾ ಮಾಡುತಿದೆ ರಸ್ತೆ ಗಳು ಎಲ್ಲೆಡೆ ಗುಂಡಿ ಗಳು ಬಿದ್ದು ಹೋಗಿದ್ದು ಅಭಿವೃದ್ಧಿ ಎನ್ನುವುದು ಮರೆಮಾಚ್ಚಿದೆ ಧರ್ಮ ಧರ್ಮ ಗಳನ್ನು ಏತ್ತಿ ಕಟ್ಟಿ ರಾಜಕಾರಣಿಗಳು ರಾಜಕೀಯ ಮಾಡುತಿದ್ದು . ಎಲ್ಲರಿಗೂ ಒಂದೇ ಕಾನೂನು ಗಳು ಬರಬೇಕಾಗಿದ್ದು ಇದು ಕೂಡ ದೇಶದ ಏಕತೆ ಗೆ ದಕ್ಕೆ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮಾಡಿದ ಆಶ್ವಾಸನೆ ಗಳು ಗೆದ್ದನಂತರ ತೆರೆಗೆ ಸರಿಯುತ್ತೆ.
ರಸ್ತೆಗಳಲ್ಲಿ ಗುಂಡಿಗಳ ರಾಜ್ಯ, ಅಭಿವೃದ್ಧಿ ಕಾಗದದ ಮೇಲಷ್ಟೇ! ಮಳೆ ಬಂದರೆ ಬೋಟ್ ಬೇಕು, ಬಸ್ ಅಲ್ಲ . ಜನರ ಹಣ ಗುಂಡಿಯಲ್ಲಿ, ನಾಯಕರ ಕೈಸಲ್ಲಿ “ಅಭಿವೃದ್ಧಿ” ಜನರ ವಾಹನಗಳು ಹಾಳಾಗಲಿ, ಜೀವ ಹೋದರೂ ಪರವಾಗಿಲ್ಲ, ಕಾಗದದ ಮೇಲಿನ ಅಂಕಿಅಂಶವೇ ಮುಖ್ಯ ಎನ್ನುವ ಸ್ಥಿತಿ.
ಮತ ಕೇಳುವ ಮುನ್ನ: ನಿಮಗೆ ಉದ್ಯೋಗ, ಉಚಿತ ಶಿಕ್ಷಣ, ಉತ್ತಮ ರಸ್ತೆ, ಭ್ರಷ್ಟಾಚಾರರಹಿತ ಆಡಳಿತ!” “ನಾವು ನಿಮ್ಮ ಸೇವಕರು, ನಿಮ್ಮ ಕನಸುಗಳೇ ನಮ್ಮ ಗುರಿ!”“ವಿಶ್ವಮಟ್ಟದ ರಸ್ತೆ, ಪ್ರತಿಯೊಬ್ಬರಿಗೂ ಉದ್ಯೋಗ, ಉತ್ತಮ ಆಸ್ಪತ್ರೆ, ಎಲ್ಲೆಡೆ ಬೆಳಕು!”ಸುಳ್ಳಿನ ಅಭಿವೃದ್ಧಿ ನಿರುದ್ಯೋಗಿ ಯುವಕರ ನಿರಾಶೆ ಮತ ಹಾಕುವುದು ಮಾತ್ರ ಜನರ ಕರ್ತವ್ಯವಲ್ಲ,
👉 ಅಭಿವೃದ್ಧಿ ಕೇಳುವುದು,
👉 ಪಾರದರ್ಶಕತೆ ಬೇಡುವುದು,
👉 ನ್ಯಾಯ ಮತ್ತು ಸಮಾನತೆ ಒತ್ತಾಯಿಸುವುದೂ ಜನರ ಹಕ್ಕು. ರಸ್ತೆ, ಉದ್ಯೋಗ, ಶಿಕ್ಷಣ, ಆರೋಗ್ಯ — ಇವು ದಯೆಯ ದಾನವಲ್ಲ,
ಇವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳು. ಹಕ್ಕಿಗಾಗಿ ಧ್ವನಿ ಎತ್ತುವುದು ನಿಜವಾದ ಪ್ರಜಾಪ್ರಭುತ್ವ.
👉 ಅಭಿವೃದ್ಧಿ ಕೇಳುವುದು,
👉 ಪಾರದರ್ಶಕತೆ ಬೇಡುವುದು,
👉 ನ್ಯಾಯ ಮತ್ತು ಸಮಾನತೆ ಒತ್ತಾಯಿಸುವುದೂ ಜನರ ಹಕ್ಕು. ರಸ್ತೆ, ಉದ್ಯೋಗ, ಶಿಕ್ಷಣ, ಆರೋಗ್ಯ — ಇವು ದಯೆಯ ದಾನವಲ್ಲ,
ಇವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳು. ಹಕ್ಕಿಗಾಗಿ ಧ್ವನಿ ಎತ್ತುವುದು ನಿಜವಾದ ಪ್ರಜಾಪ್ರಭುತ್ವ.