ಪುತ್ತೂರು: ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಮುಂದಿನ 6 ತಿಂಗಳೊಳಗೆ 300 ಎಕ್ರೆ ನಿವೇಶನವನ್ನು ಕೊಟ್ಟೇ ಕೊಡ್ತೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಶನಿವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮಗಳಲ್ಲಿ ಕಾಯ್ದಿರಿಸಿದ ನಿವೇಶನ ಮತ್ತು ಗ್ರಾಪಂಗಳಿಗೆ ಬಂದಿರುವ ನಿವೇಶನ ರಹಿತ ಫಲಾನುಭವಿಗಳ ಮಾಹಿತಿಯನ್ನು ಪಡೆದರು.
ಮುಂದಿನ ಆರು ತಿಂಗಳ ಬಳಿಕ ನಿವೇಶನ ಇಲ್ಲದ ಅರ್ಹ ಬಡಕುಟುಂಬಗಳಿಗೆ ೨೦೦೦ ನಿವೇಶನ ಹಂಚುವ ಉದ್ದೇಶ ಇದೆ. ನನ್ನ ಕ್ಷೇತ್ರದಲ್ಲಿ ಯಾರೂ ನಿವೇಶನ ಇಲ್ಲದೆ ಇರಬಾರದು, ಕುಡಿಯುವ ನೀರು ಇಲ್ಲದೆ ಇರಬಾರದು, ಕರೆಂಟ್ ಸಂಪರ್ಕ ಇಲ್ಲದವರು ಇರಬಾರದು ಎಂಬುದು ನಮ್ಮ ಧ್ಯೇಯವಾಗಿದೆ. ನಮ್ಮ ಈ ಪುಣ್ಯ ಕಾರ್ಯಕ್ಕೆ ಅಧಿಕಾರಿಗಳು,ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕರು ಈ ಸಂಸರ್ಭದಲ್ಲಿಮನವಿಮಾಡಿದರು.
ಪ್ರತಿ ಗ್ರಾಮದಲ್ಲಿಯೂ ನಿವೇಶನಕ್ಕೆ ಜಾಗ ಮೀಸಲಿಟ್ಟು ಅದರ ಆರ್‌ಟಿಸಿ ಮಾಡಿ ನೈಜ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಚುನಾವಣೆ ಪೂರ್ವದಲ್ಲಿ ಕೊಟ್ಟಮಾತಿನಂತೆ ಕೆಲಸಮಾಡುತ್ತೇನೆ. ಬಡವರ ಕಣ್ಣೀರು ೬ ಒರೆಸುವ ಕೆಲಸ ಮಾಡುತ್ತೇನೆ. ನಿವೇಶನಕ್ಕಾಗಿ ಗುರುತಿಸಿದ ಜಾಗಕ್ಕೆ ರಸ್ತೆ, ವಿದ್ಯುತ್, ಸಂಪರ್ಕವನ್ನು ಒದಗಿಸಲಾಗುವುದು ಎಂದು ಹೇಳಿದರು.
ಇಟ್‌ಇಸ್ ಟಾರ್ಗೆಟೆಡ್ ಫಾರ್ ಆಲ್ ಪಿಡಿಓಸ್
ಯಾವ ಗ್ರಾಮದಲ್ಲಿ ಎಷ್ಟು ಎಕರೆ ಜಾಗಕ್ಕೆ ಪ್ರಸ್ತಾವನೆ ಹೋಗಿದೆ. ಎಷ್ಟು ಜಾಗ ಮಂಜೂರಾಗಿದೆ ಎಂದು ಎಲ್ಲಾ ಪಿಡಿಓಗಳಿಗೆ ತಿಳಿದಿರಬೇಕು. ಸಭೆಯಲ್ಲಿ ಸುಮ್ಮನೆ ಕಿವಿಕೊಡುವುದಲ್ಲ. ಇಟ್ ಇಸ್ ಟಾರ್ಗೆಟೆಡ್ ಫಾರ್ ಆಲ್ ಪಿಡಿಒಸ್ ಎಂದು ಶಾಸಕರು ಸೂಚನೆ ನೀಡಿದರು.
ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ
ಸಾಫ್ಟ್‌ವೇರ್ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತಂದು ಪಾಲೋ ಅಪ್ ಮಾಡಬೇಕು. ಅದಕ್ಕಾಗಿಯೇ ನಮ್ಮ ಕಚೇರಿಯಲ್ಲಿ ಸಿಬ್ಬಂದಿಗಳಿದ್ದಾರೆ. ಅವರಿಂದ ಆಗದಿದ್ದರೆ ನನಗೆ ನೇರವಾಗಿ ಕರೆಮಾಡಿ. ನನಗೆ ಕರೆ ಮಾಡುವುದಕ್ಕೆ ಯಾವುದೇ ಮುಜುಗರ ಬೇಡ ಎಂದು ಶಾಸಕರು ಮನವಿ ಮಾಡಿದರು.
ಪುತ್ತೂರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರು ಹಕ್ಕುಪತ್ರ ವಿತರಿಸಲಿದ್ದಾರೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಾವಿರ ಮಂದಿಗೆ ಹಕ್ಕುಪತ್ರ ನೀಡಬೇಕು ಎನ್ನುವ ಗುರಿಯಿದೆ. ಎರಡು ಸಾವಿರ ಮಂದಿಗೆ ನಿದೇಶನ ನೀಡುವ ಕೆಲಸ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲ. ಎರಡು ಸಾವಿರ ಮಂದಿಗೆ ನಿವೇಶನದ ಹಕ್ಕು -ತ್ರ ನೀಡುವುದಾದರೆ ನಾನೇ ಬರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರುತಿಳಿಸಿದ್ದಾರೆ. ಜೊತೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ಆಗಮಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಬಡವರ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ: ಬಡ ನಿವೇಶನ ರಹಿತರಿಗೆ
ನಿವೇಶನ ನೀಡುವ ಮೂಲಕ ಬಡವರ ಸೇವೆ ಮಾಡುವ ಕೆಲಸ ಮಾಡಬೇಕು. ಬಡವರ ಕೆಲಸ ದೇವರ ಕೆಲಸ. ನೀವು ಸಹಕರಿಸಿ ಪುಣ್ಯ ಕಟ್ಟಿಕೊಳ್ಳಿ. ಬಡವರ ಕೆಲಸದಲ್ಲಿ ಯಾರೂ ಅಸಡ್ಡೆ ಮಾಡಬಾರದು. ವಿದವೆಯವರು, ಹೆಣ್ಣು ಮಕ್ಕಳ ತಾಯಂದಿರು, ಬೀಡಿ ಕಟ್ಟಿ, ಗಾರ್ಬಲ್ ಕೆಲಸ ಮಾಡಿ ಜೀವನ ನಡೆಸುವ ಬಡ ಮಹಿಳೆಯರು, ಬಾಡಿಗೆ ಮನೆಯಲ್ಲಿದ್ದು ಕಷ್ಟಪಡುವವರಿದ್ದು ಅವರ ಕಷ್ಟಗಳಲ್ಲಿ ಕಣ್ಣೀರು ಒರೆಸುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದು ಲಾಸ್ಟ್ ವಾರ್ನಿಂಗ್:
ಬೇರೆ ಗ್ರಾಮದವರಿಂದ ಬಂದ ಅರ್ಜಿ ಸಾಫ್ಟ್‌ವೇರ್‌ನಲ್ಲಿ ಎಂಟ್ರಿ ಮಾಡಲು ಅವಕಾಶ ಇದೆ ಎಂಬುದು ಗೊತ್ತಿದೆಯಾ ಎಂದು ಶಾಸಕರು ಪ್ರಶ್ನಿಸಿದರು ಇದಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿರವರು ಪಿಡಿಯವರು ಬಂದಿದ್ದು ಅವಕಾಶ ಇಲ್ಲ ಎಂದಿದ್ದಾರೆ. ತಪ್ಪಾಗಿ ಆದೇಶವಾಗಿದೆ ಎಂದು ತಿಳಿಸಿದರು. ಸಾಫ್ಟ್‌ವೇರ್‌ನಲ್ಲಿ ಅವಕಾಶ ಇಲ್ಲ. ರೇಷನ್ ಕಾರ್ಡ್ ಬದಲಾಗಿರುತ್ತದೆ ಹಾಗಾಗಿ ಆಗುವುದಿಲ್ಲ ಎಂದು ಪಿಡಿಓಗಳು ತಿಳಿಸಿದರು. ಇದು ನಮ್ಮ ಕೆಲಸ ಅಲ್ಲ ಎಂಬ ಭಾವನೆ ಪಿಡಿಓಗಳಲ್ಲಿದೆ. ನಾನೇ ರಾಜೀವ್ ಗಾಂಧೀ ನಿಗಮದಲ್ಲಿ ಸಭೆ ನಡೆಸಿ ಬ್ಲಾಕ್ ತೆಗೆದು ಅವಕಾಶ ಮಾಡಿಕೊಟ್ಟಿದೇವೆ. ಇದನ್ನು ಪಿಡಿಒರವರು ತಿಳಿದುಕೊಳ್ಳಲಿ. ನಾನೇ ತೆಗೆಸಿದ್ದೇನೆ. ಎಂಟ್ರಿ ಮಾಡುವುದಕ್ಕೆ ಸಮಸ್ಯೆಯಿಲ್ಲ. ನೀವು ಪ್ರಯತ್ನ ಪಟ್ಟಿಲ್ಲ. ರಾಜೀವ್ ಗಾಂಧಿ ವಸತಿ ನಿಗಮ ಆಯುಕ್ತರ ಮೂಲಕ ಸಾಫ್ಟ್‌ವೇರ್ನನಲ್ಲಿ ಅವಕಾಶ ಮಾಡಿಕೊಡುವ ಜವಾಬ್ದಾರಿ ನಾನು ಮಾಡುತ್ತೇನೆ. ಮೂರು ಜನರಿಗೆ ನಿಗಮದಲ್ಲಿ ತರಬೇತಿ ನೀಡಲಾಗಿದ್ದು ನಿಮ್ಮ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ಸಾಫ್ಟ್‌ವೇರ್ ಮಾನದ ನಿರ್ಮಿತವಾಗಿದ್ದು ಅದರಲ್ಲಿ ಬದಲಾವಣೆಗೆ ಅವಕಾಶವೂ ಇರುತ್ತದೆ. ಅದಕ್ಕೆ ತಾಂತ್ರಿಕ ತಂಡವಿದೆ. ನೀವು ಪ್ರಯತ್ನಿಸಬೇಕು ಎಂದು ಹೇಳಿದರು.
ಅಪ್ ಲೋಡ್ ಮಾಡಲು ಆಡಳಿತ ಮಂಡಳಿಯ ನಿರ್ಣಯ ಬೇಕಾಗಿಲ್ಲ. ಆಯ್ಕೆಗೆ ಆಡಳಿತ ಮಂಡಳಿ ಸಭೆಯಲ್ಲಿಟ್ಟು ನೀಡಬೇಕು. ಮಾಡದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುತ್ತೇನೆ. ಪಂಚಾಯತ್ ನಿಮ್ಮದೇ ಎಂದು ಕೊಂಡಿದ್ದೀರಾ, ಬಡವರಿಗೆ ಸಹಕಾರ ನೀಡಬೇಕು. ಪಕ್ಷಬೇಧ ಮಾಡಬಾರದು. ಯಾವುದೇ ಪಕ್ಷ ಆಡಳಿತಲ್ಲಿರಲಿ. ಬಡವರಿಗೆ ಅನ್ಯಾಯ ಮಾಡಿದರೆ ಅವರ ಕಣ್ಣೀರ ಶಾಪ ತಟ್ಟಲಿದೆ. ನಮಗೇನು ಅಧಿಕಾರ ಇಲ್ಲವೇ, ಅಧಿಕಾರ ಚಲಾಯಿಸಲು ಅವಕಾಶ ನೀಡಬೇಡಿ, ಚಲಾಯಿಸಿದರೆ ಯಾರನ್ನೂ ಬಿಡುವುದಿಲ್ಲ. ಇದು ನಿಮಗೆ ಲಾಸ್ಟ್ ವಾರ್ನಿಂಗ್ ಎಂದು ಎಚ್ಚರಿಸಿದರು.
ಹೊರ ಗ್ರಾಮದವರಿಗೂ ಅವಕಾಶವಿದೆ: ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಈ ಹಿಂದೆ ಆಯಾ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು, ಹೊರಗಿನ ಪಂಚಾಯತ್ ನವರಿಗೆ ಅವಕಾಶ ಇರಲಿಲ್ಲ. ಬೇರೆ ಜಿಲ್ಲೆಗಳಲ್ಲಿ ಇತ್ತು. ಬೆಂಗಳೂರು ರಾಜೀವ್ ಗಾಂಧೀ ವಸತಿ ನಿಗಮದಲ್ಲಿ ಸಭೆ ನಡೆಸಿ ಸಾಫ್ಟ್‌ವೇರ್ ನಲ್ಲಿ ಬ್ಲಾಕ್ ತೆಗೆಯಲಾಗಿದ್ದು ಯಾರಿಗೆ ಎಲ್ಲಿ ಬೇಕಾದರೂ ನಿರ್ದೇಶನಕ್ಕೆ ಅರ್ಜಿಸಲ್ಲಿಸಬಹುದು. ಯಾರೇ ಅರ್ಜಿ ಕೊಟ್ಟರೂ ಅದನ್ನು ತಿರಸ್ಕರಿಸುವಂತಿಲ್ಲ, ಒಂದು ಪಂಚಾಯತ್ ಮಿತಿಗಿಂತ ಅಧಿಕ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಬೇರೆ ಪಂಚಾಯತ್ ನಲ್ಲಿ ನಿವೇಶನವಿದ್ದರೆ ಅಲ್ಲಿ ಅರ್ಜಿ ಸಲ್ಲಿಸಬಹುದು ಶಾಸಕರು ತಿಳಿಸಿದರು.
ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುತ್ತೇವೆ: ನಿವೇಶನ ಕಾಟಾಚಾರಕ್ಕೆ ನೀಡುವುದಿಲ್ಲ. ನಿದೇಶನಕ್ಕೆ ನಿಗದಿಗೊಳಿಸಿದ ಜಾಗ ಸಮತಟ್ಟು ಮಾಡಲು, ರಸ್ತೆ, ನೀರು, ವಿದ್ಯುತ್ ಸೇರಿದಂತೆ ಅಲ್ಲಿಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಧಾನ್ಯತೆಯಲ್ಲಿ ತಕ್ಷಣ ಅನುದಾನ ನೀಡಲಾಗುವುದು. ನಿವೇಶನ ನೀಡುವಾಗ ಫಲಾನುಭವಿಗಳು ಆಕರ್ಷಿತರಾಗಬೇಕು ಶಾಸಕರು ತಿಳಿಸಿದರು.
ಬಡಗನ್ನೂರು ಒತ್ತುವರಿ ತೆರವುಗೊಳಿಸಿ: ಬಡಗನ್ನೂರಿನಲ್ಲಿ ಈಗಾಗಲೇ ನಿಗದಿಪಡಿಸಿದ 10 ಎಕರೆ ಜಾಗದಲ್ಲಿ 5 ಎಕರೆ ಬೇರೆಯವರು ಸ್ವಾಧೀನಪಡಿಸಿಕೊಂಡಿದ್ದಾರೆ. ಇನ್ನೂ 5 ಎಕರೆ ಮಾತ್ರ ಇರುವುದಾಗಿ ಸಭೆಯಲ್ಲಿ ಪ್ರಸ್ತಾಪವಾದಾಗ ನಿವೇಶನಕ್ಕೆ ನಿಗದಿ ಪಡಿಸಿದ ಜಾಗ ಒತ್ತುವರಿ ಮಾಡಿಸಿದ್ದರೆ ತೆರವುಗೊಳಿಸಿ. ಇಲ್ಲದಿದ್ದರೆ ಒತ್ತುವರಿ ಮಾಡಿಕೊಂಡವರು ಬೇರೆ ಕಡೆ ಅಷ್ಟೇ ಜಾಗಖರೀದಿ ಮಾಡಿಕೊಡಬೇಕು ಎಂದು ಶಾಸಕರು ಸೂಚಿಸಿದರು.
ವಸತಿ ಯೋಜನೆಯಲ್ಲಿ ರೂ.3.50ಲಕ್ಷ ದೊರೆಯಲಿದೆ: ಈ ಹಿಂದೆ ವಸತಿ ಯೋಜನೆಯಲ್ಲಿ ಒಂದು ಮನೆಗೆ ರೂ.1.20ಲಕ್ಷ ಅನುದಾನ ಮಾತ್ರ ಬರುತ್ತಿತ್ತು. ಇದನ್ನು ರೂ.3.50 ಲಕ್ಷ ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು ಅವರು ಒಪ್ಪಿಗೆ ಸೂಚಿಸಿದ್ದಾರೆ. ಈಗ ನಿವೇಶನ ನೀಡಿದರೆ ಮುಂದೆ ಮನೆ ಕಟ್ಟಲು ಮಾಡಿದ್ದು ಅವರು
ಮುಂಡೂರು ಪಿಡಿಓಗೆ ಮೆಮೋ ಮಾಡಿ: ಸಭೆಗೆ ಮುಂಡೂರು ಗ್ರಾ.ಪಂ ಪಿಡಿಓ ಗೈರಾಗಿದ್ದರು. ಪಿಡಿಓ ರಜೆ ಮಾಡಿರುವ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದಾರಾ ಎಂದು ಕಾರ್ಯ ನಿವ ಕಾಧಿಕಾರಿ ನವೀನ್ ಭಂಡಾರಿಯವರಲ್ಲಿ ವಿಚಾರಿಸಿದಾಗ ರಜೆ ಮಾಡಿರುವ ಬಗ್ಗೆ ನಸುನಕ್ಕೆ ಬಂದಿಲ್ಲ ಎಂದು ತಿಳಿಸಿದಾಗ ಪಿಡಿಓ ವಿರುದ್ಧ ಮೆಮೋ ಮಾಡುವುವ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರಿಗೆ ಸೂಚಿಸಿದರು.
ವೇದಿಕೆಯಲ್ಲಿ ಪುತ್ತೂರು ತಾಪಂ ಮುಖ್ಯ ಕಾರ್ಯನಿವ್ಹಣಾಧಿಕಾರಿ ನವೀನ್ ಭಂಡಾರಿ, ಬಂಟ್ವಾಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ , ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ್ ಉಪಸ್ಥಿತರಿದ್ದರು.