ಕಾಂತಾರ ಚಾಪ್ಟರ್ ಒನ್ ಚಿತ್ರದ ಪ್ರಚಾರ ಶುರು ಆಗಿದೆ. ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಆಗಿದೆ. ಈ ಒಂದು ಪ್ರೀ-ರಿಲೀಸ್ ಇವೆಂಟ್ ಅಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ನಿರ್ಮಾಪಕ ವಿಜಯ್ ಕಿರಗಂದೂರು ಇಲ್ಲಿದ್ದಾರೆ. ಆದರೆ, ಈ ಒಂದು ಪ್ರೀ-ರಿಲೀಸ್ ಇವೆಂಟ್ ಆದ್ಮೇಲೆ ನಾಲ್ಕ ದಿನ ನಾಲ್ಕು ರಾಜ್ಯದಲ್ಲಿ ಪ್ರಚಾರ ಪ್ಲಾನ್ ಮಾಡಿದ್ದಾರೆ.
ಮುಂಬೈ, ಕೇರಳ , ಚೆನ್ನೈ, ಹೈದ್ರಾಬಾದ್ ಹೀಗೆ ನಾಲ್ಕು ದಿನ ನಾಲ್ಕು ರಾಜ್ಯದ ಪ್ರಮುಖ ನಗರದಲ್ಲಿಯೆ ಚಿತ್ರ ಪ್ರಚಾರ ಮಾಡುತ್ತಿದ್ದಾರೆ. ರಿಲೀಸ್‌ಗೆ ಇನ್ನು 11 ದಿನ ಇರೋವಾಗಲೇ ಈ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ನಾಲ್ಕು ರಾಜ್ಯದಲ್ಲಿ ನಾಲ್ಕು ದಿನ ಪ್ರಚಾರ ಮಾಡುತ್ತಿದ್ದಾರೆ. 25,26,27,28 ಹೀಗೆ ನಾಲ್ಕು ದಿನ ಮುಂಬೈ, ಚೆನ್ನೈ, ಹೈದರಾಬಾದ್, ಕೇರಳದಲ್ಲಿ ಕಾಂತಾರ ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಕಾಂತಾರ ಚಿತ್ರದ ಪ್ರಚಾರವನ್ನೂ ಮಾಡಿದ್ದರು. ಅದು ಒಂದು ಹಂತಕ್ಕೆ ಇತ್ತು. ಆದರೆ ಈಗ ಕಾಂತಾರ ಚಾಪ್ಟರ್ ಒನ್ ಚಿತ್ರ ದೊಡ್ಡಮಟ್ಟದಲ್ಲಿಯೇ ಪ್ರಚಾರವೇ ಆಗುತ್ತಿದೆ. ಹೌದು, ಈ ರಾಜ್ಯದ ಪ್ರಮುಖ ನಗರದಲ್ಲಿಯೇ ಕಾಂತಾರ ಒನ್ ಚಿತ್ರವನ್ನ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಆಯಾ ರಾಜ್ಯದಲ್ಲಿ ಈ ಚಿತ್ರದ ಪ್ರಚಾರವನ್ನ ಮಾಡುತ್ತಿದ್ದಾರೆ. ಕಾಂತಾರ ಚಾಪ್ಟರ್ ಒನ್ ಚಿತ್ರವನ್ನ ಅಕ್ಟೋಬರ್-2 ರಂದು ರಿಲೀಸ್ ಮಾಡಲಾಗುತ್ತಿದೆ. ದೇಶ ಮತ್ತು ವಿದೇಶದಲ್ಲಿಯೂ ಈ ಚಿತ್ರ ರಿಲೀಸ್ ಆಗುತ್ತಿದೆ. 30 ದೇಶದಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ.