ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಕ್ಕೆ ಹಲಸಿನ ಮಣೆ ಸಮರ್ಪಣೆ. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಲಸಿನ ಮಣೆ ಯ ಅಗತ್ಯವಿದ್ದು ಅಧ್ಯಕ್ಷರ ಕೋರಿಕೆ ಮೇರೆಗೆ ಭೀಮಯ್ಯ ಭಟ್ ಸುಬಿಕ್ಷಾ ನಿಲಯ ಸಾಮೇತಡ್ಕ ಲಕ್ಷ್ಮಿ ಟಿoಬರ್ ಮತ್ತು ಫರ್ನಿಚರ್ ಇವರು ಸುಮಾರು 18000 ರೂಪಾಯಿಯ ಹಲಸಿನ ಹಲಗೆಯನ್ನು ಉಚಿತವಾಗಿ ನೀಡಿರುತ್ತಾರೆ,ಮಣೆ ಯ ತಯಾರಿ ಕೆಲಸವನ್ನು ಮೋಹನ ಗೌಡ ವಾಳ್ತಜೆ 8000ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ನಡೆಸಿರುತ್ತಾರೆ.
ಇವರುಗಳನ್ನು ಇಂದು ಬೆಳ್ಳಗೆ ದೇವರ ಪೂಜೆಯ ನಂತರ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆ ಮತ್ತು ಪ್ರದಾನ ಅರ್ಚಕರಾದ ವಸಂತ ಕೆದಿಲಾಯ ಇವರು ಶಾಲು ಹೊದಿಸಿ, ದೇವರ ಫೋಟೋ ಮತ್ತು ಪ್ರಸಾದ ನೀಡಿ ಗೌರವಿಸಿದರು.