ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 91ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಅಂಗವಾಗಿ ಸೆ.29ರಂದು ಬೆಳಿಗ್ಗೆ ಶಾರದಾ ವಿಗ್ರಹ ಪ್ರತಿಷ್ಠೆ ನಡೆಯಿತು.
ಶಾರದೋತ್ಸವ ಉದ್ಘಾಟನೆ: ವಿಗ್ರಹ ಪ್ರತಿಷ್ಠೆ ಬಳಿಕ ಶಾರದೋತ್ಸವ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನತೆ ನಾಡಹಬ್ಬದ ಸಂಭ್ರಮದಲ್ಲಿದ್ದು, ಶಾರದಾ ಮಹೋತ್ಸವದ ಆರಾಧನೆಯಲ್ಲಿ ಪುತ್ತೂರಿನ ಭಕ್ತಾದಿಗಳು ಮತ್ತೊಮ್ಮೆ ಜ್ಞಾನಭರಿತ ಸಮಾಜವನ್ನು ನಿರ್ಮಾಣ ಮಾಡಲು ತಾವೆಲ್ಲ ಇಲ್ಲಿ ನೆರೆದಿzವೆ. 91ನೇ ವರ್ಷದ ಸಂಭ್ರಮದಲ್ಲಿರುವ ಈ ಐತಿಹಾಸಿಕ ಶಾರದಾ ಮಹೋತ್ಸವ ಇದೊಂದು ದಸರಾ ಮಹೋತ್ಸವ ಆಗಿ ಪರಿವರ್ತನೆ ಆಗಿದೆ, ಮಂದಿರದ ಅಧ್ಯಕ್ಷ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತುರವರು ಮೂರು ವರ್ಷದಿಂದ ವಿಜ್ರಂಭಣೆಯಿಂದ, ಸಂಭ್ರಮದ ಜತೆಗೆ ಪುತ್ತೂರಿನ ಜನತೆಗೆ ಭಜನೆಯ ಮುಖಾಂತರ ಭಗವಂತನನ್ನು ಕಾಣುವ ಕೆಲಸ ಮಾಡುತ್ತಿದ್ದಾರೆ, ತಮ್ಮ ಮುಂದಿನ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿಶ್ವನಾಥ್ ಕುಲಾಲ್, ರಾಜೇಶ್ ಬನ್ನೂರು, ಅಜಿತ್ ಹೊಸಮನೆ, ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ, ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ನವೀನ್ ಕುಲಾಲ್, ಉಪಾಧ್ಯಕ್ಷರಾದ ಯಶವಂತ ಆಚಾರ್ಯ, ದಯಾನಂದ (ಆದರ್ಶ), ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಉತ್ಸವ ಸಮಿತಿ ಸಂಯೋಜಕ ಕೃಷ್ಣ ಎಂ. ಅಳಕೆ, ಶಾರದೆ ವಿಗ್ರಹ ನಿರ್ಮಿಸಿದ ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭು, ಕಿಟ್ಟಣ್ಣ ಗೌಡ, ಜಯಕಿರಣ್ ಉರ್ಲಾಂಡಿ, ವಸಂತ್, ಪಕೀರ ಗೌಡ, ಗೋಪಾಲ ಆಚಾರ್ಯ, ಗಿರೀಶ್, ಪದ್ಮನಾಭ, ಗಣೇಶ್ ಆಚಾರ್ಯ, ಪ್ರಜ್ನೇಶ್, ಪ್ರಜ್ವಲ್, ಪ್ರವೀತ್, ಸಾಗರ್, ಪುಷ್ಪರಾಜ್ ಹೆಗ್ಡೆ, ಸುದೇಶ್ ಚಿಕ್ಕಪುತ್ತೂರು, ನವನೀತ್ ಬಜಾಜ್, ಕೃಷ್ಣ ಮಚ್ಚಿಮಲೆ, ಯೋಗಾನಂದ ರಾವ್ ಉರ್ಲಾಂಡಿ, ತಾರನಾಥ್ ಹೆಚ್, ರಾಜೇಶ್ ರೈ ಸಂಪ್ಯ, ಮಂದಿರದ ಮಾತೃ ಮಂಡಳಿ ಸಮಿತಿ ಸದಸ್ಯರು, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರ ತಂಡದ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.