ಬೆಳ್ತಂಗಡಿ : ಸೆ 30 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸೇವಾಪಾಕ್ಷಿಕ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ರಂದು ನಡೆದ ಕಾರ್ಯಕ್ರಮದಲ್ಲಿ ರಕ್ತದಾನ ನೀಡುವ ಮೂಲಕ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ. ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್, ಪದಾಧಿಕಾರಿಗಳಾದ ಹರೀಶ್ ಗೌಡ ಸಂಭೋಲ್ಯ,ಸುಧೀರ್ ಚಾರ್ಮಾಡಿ,ಪವನ್ ಶೆಟ್ಟಿ ಉಜಿರೆ,ಲೋಕ್ಷತ್ ಗೌಡ ಬೈಪಾಡಿ -ಬಂದಾರು, ಆಳ್ವಾಸ್ ಆಸ್ಪತ್ರೆಯ ಮುಖ್ಯಸ್ಥರಾದ ಉಮೇಶ್ , ಗಣೇಶ್ ಕುಲಾಲ್ ಕುವೆಟ್ಟು ಪಂಚಾಯತ್ ಸದಸ್ಯ, ಸಚಿನ್ ಶೆಟ್ಟಿ ಗುರುವಾಯನಕೆರೆ, ಚಂದ್ರಕಾಂತ ಲಾಯಿಲ, ಅಬಿಜಿತ್ ಶೆಟ್ಟಿ ಪಡಂಗಡಿ, ಸುಕೇಶ್ ಮೇಲಂತ ಬೆಟ್ಟು ಹಾಗೂ ಪ್ರಮುಖರು ಉಪಸ್ಥಿತರಿದ್ದರು.