ಪುಣಚ ಗ್ರಾಮದ ಪಾಲಸ್ತಡ್ಕ ಎಂಬಲ್ಲಿ ವ್ಯವರಿಸುತ್ತಿದ್ದ ಆನಂದ ಅವರ ಮಾಲಕತ್ವದ ಇಂಟರ್ಲಾಕ್ ಫ್ಯಾಕ್ಟರಿಯ ಸಿಸಿ ಟಿವಿಯನ್ನು ಪುಡಿಗೈದು,ಬಾಗಿಲು ಮುರಿದು, ಹಿಂದೂಗಳ ಆರಾಧ್ಯ ದೇವಿ ಮಹಿಷಮರ್ದಿನಿಯ ಮತ್ತು ದೇವರ ಫೋಟೋಗಳಿಗೆ ಬೆಂಕಿ ಕೊಟ್ಟ ಅಪಘಾತಕಾರಿ ಘಟನೆ ಸೆಪ್ಟೆಂಬರ್ 29ರಂದು ನಡೆದಿತ್ತು.
ಈ ಬಗ್ಗೆ ಆನಂದ ಗೌಡರವರು ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಈ ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿ ವಿ ಆರ್ ಸುಟ್ಟು ಹೋಗಿದ್ದರು ಮಾಲಕರ ಮೊಬೈಲ್ ಗೆ ಸಿ ಸಿ ಟಿವಿ ಸಂಪರ್ಕ ಇದ್ದ ಕಾರಣ ದ್ರಶ್ಯಾವಳಿಗಳನ್ನು ಪರಿಶೀಲಿಸಿ ಅದರ ಗುರುತಿನ ಮೇರೆಗೆ ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ. ಪೋಷಕರನ್ನು ವಿಚಾರಣೆ ನಡೆಸಿದಾಗ ಬಾಲಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಘಟನ ಸ್ಥಳ ಕ್ಕೆ ಹಿಂದೂ ಮುಖಂಡ ಮುರಳಿ ಕೃಷ್ಣ ಹಸಂತಡ್ಕ, ಪುತ್ತೂರು ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಭೇಟಿ .
ಪುಣಚ ಗ್ರಾಮದ ಪಾಲಸ್ತಡ್ಕ ನಿವಾಸಿ ಆನಂದ ಗೌಡ ಎಂಬವರ ಪತ್ನಿ ಹೆಸರಿನಲ್ಲಿರುವ ಪಿ ಬಿ ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕಕ್ಕೆ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದರು. ಇಂಟರ್ ಲಾಕ್ ಘಟಕವನ್ನು ಪರೀಶಿಲಿಸಿ ನಂತರ 6 ಗಂಟೆಗೆ ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶ ಮಾಡಿ, 2 ಸಿಸಿ ಕ್ಯಾಮರಾಗಳನ್ನು, ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮರಾದ ಡಿವಿಆರ್ ಮತ್ತು ದೇವರ ಪೊಟೋವನ್ನು ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿರುತ್ತದೆ ಎಂದು ಆನಂದ ಗೌಡ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.