ಮಂಗಳೂರು: ದೇಶದ್ರೋಹದ ಕೇಸ್‌ನಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಧರ್ಮಗುರು ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಪರ ಪೋಸ್ಟ್ ಹಾಕುತ್ತಿದ್ದು, ಪಿಎಫ್‌ಐ ಬಲಪಡಿಸೋ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ.
ಮಂಗಳೂರಿನ ಉಪ್ಪಿನಂಗಡಿ ಮೂಲದ ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ ಕೇಸ್‌ನಲ್ಲಿ ಪೊಲೀಸರು ಬಂಧಿಸಿದ್ದು, ಮುಸ್ಲಿಂ ಧರ್ಮಗುರುವಿನ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಸಂಘಟನೆಯಾದ ಪಿಎಫ್‌ಐ ಪರ ಪೋಸ್ಟ್ ಹಾಕುತ್ತಿದ್ದ. ಪಿಎಫ್ಐ ಸಂಘಟನೆ ಬಲಪಡಿಸೋ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ನಿಷೇಧಿತ ಸಂಘಟನೆ ಪರ ಪೋಸ್ಟ್ ಹಾಕಿ, ಪ್ರಚಾರ ಮಾಡುತ್ತಿದ್ದ. ಇದೇ ಕಾರಣಕ್ಕೆ ಸೈಯದ್ ಇಬ್ರಾಹಿಂ ತಂಙಳ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 113/2025 U/s 10 (a), (i), 13, 18 UAPA Act ರಂತೆ ಪ್ರಕರಣ ದಾಖಲು ಮಾಡಲಾಗಿದೆ.
ಪಿಎಫ್‌ಐ ಅಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. PFI ಎಂಬುದು ಭಾರತದಲ್ಲಿ 2006ರಲ್ಲಿ ಸ್ಥಾಪನೆಯಾದ ಒಂದು ಇಸ್ಲಾಮಿಸ್ಟ್ ರಾಜಕೀಯ ಸಂಘಟನೆಯಾಗಿದೆ. ಇದು ಮುಸ್ಲಿಮ್ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ತನ್ನನ್ನು ತಾನು ಹೇಳಿಕೊಳ್ಳುತ್ತದೆ. ಇದು ಕೇರಳದ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (NDF), ಕರ್ನಾಟಕದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (KFD) ಮತ್ತು ತಮಿಳುನಾಡಿನ ಮಾನಿತ ನೀತಿ ಪಸಾರೈ (MNP) ಎಂಬ ಮೂರು ಸಂಘಟನೆಗಳ ಸಂಯೋಜನೆಯಿಂದ ರೂಪುಗೊಂಡಿದೆ.