ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಸಂದೇಶವನ್ನು ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಎಂಬವರು ಶಾಸಕರ ಬಳಿ ಬಂದು ಕ್ಷಮೆ ಕೇಳಿದ್ದು ,ಬುದ್ದಿವಾದ ಹೇಳಿದ ಶಾಸಕರು ಇನ್ನು ಮುಂದೆ ಯಾರ ಬಗ್ಗೆಯೂ ಅಸಭ್ಯ ಸಂದೇಶ ಕಳುಹಿಸಬೇಡ ಎಂದು ಹೇಳಿ ಆತನಿಗೆ ಕ್ಷಮೆಯನ್ಬು ನೀಡುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಕೆಲವು ತಿಂಗಳ ಬಳಿಕ ಕಾರ್ತಿಕ್ ಫೇಸ್ ಬುಕ್ ನಲ್ಲಿ ಶಾಸಕರ ಬಗ್ಗೆ ಅಸಭ್ಯವಾದ ಪದಗಳನ್ನು ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದರ ವಿರುದ್ದ ಅಶೋಕ್ ರೈ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣದ. ಬಗ್ಗೆ ಪೊಲೀಸ್ ತನಿಖೆ ಆರಂಭವಾಗುತ್ತಿದ್ದಂತೆಯೇ ಭಯಭೀತರಾದ ಸರಕಾರಿ ನೌಕರ ಕಾರ್ತಿಕ್ ಶಾಸಕರಲ್ಲಿ ಬಂದು ನಾನು ತಪ್ಪು ಮಾಡಿದೆ ,ನನ್ನನ್ನು ಕ್ಷಮಿಸಿ ಸರ್ ಎಂದು ಅಂಗಲಾಚಿಕೊಂಡರು. ನೀವು ಕ್ಷಮಿಸದೆ ಇದ್ದಲ್ಲಿ ನನಗೆ ತೊಂದರೆಯಾಗಲಿದ್ದು, ನನ್ನ ನೌಕರಿಗೂ ಕುತ್ತು ಬರಲಿದೆ ಎಂದು ಕೇಳಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವು ನನ್ನ ಬಗ್ಗೆ ಕೆಟ್ಟ ಕಮೆಂಟ್ ಹಾಕಿದ್ದೀರಿ, ನಾನು ನಿಮಗಾಗಲಿ, ನಿಮ್ಮ ಕುಟುಂಬದವರಿಗಾಗಲಿ ಏನೂ ತೊಂದರೆ ಕೊಟ್ಟಿಲ್ಲ ಮತ್ತೆ ಯಾಕೆ ನನ್ನ ಮೇಲೆ ಕೋಪ ಎಂದು ಕೇಳಿದರು. ನೀವು ಮಾಡಿದ ಈ ಕೃತ್ಯಕ್ಕೆ ನೀವು ಪಶ್ಚತ್ತಾಪ ಪಟ್ಟು ನನ್ನ ಬಳಿ ಬಂದಿದ್ದೀರಿ ಇದಕ್ಕಾಗಿ ನಿಮ್ಮನ್ನು ಕ್ಷಮಿಸಿದ್ದೇನೆ. ಮುಂದಕ್ಕೆ ಯಾರ ಬಗ್ಗೆಯೂ ಕೆಟ್ಟ ಕಮೆಂಟ್ ಹಾಕಬೇಡಿ. ಈ ರೀತಿಯ ಕಮೆಂಟ್ ಹಾಕುವುದು ಸಬ್ಯರ ಲಕ್ಷಣವಲ್ಲ ಎಂದು ಬುದ್ದಿವಾದ ಹೇಳಿ ಕಳುಹಿಸಿದರು. ಶಾಸಕರ ಹೃದಯ ವೈಶಾಲ್ಯತೆಗೆ ಅಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.