ಪುತ್ತೂರು: ಅಶೋಕ ಜನಮನ ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರೂ ನಮ್ಮ ಅತಿಥಿಗಳು ,ಅವರಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ ಮತ್ತು ಬರುವ ಪ್ರತೀಯೊಬ್ಬರೂ ಅನ್ನದಾನ ದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು, ಯಾರೂ ಊಟ ಸಿಗದೆ ಇರುವಂತಾಗಬಾರದು ಎಂದು ಶಾಸಕರುಸೂಚನೆಯನ್ನು ನೀಡಿದ್ದಾರೆ.
ಶಾಸಕರ ಕಚೇರಿ ಸಭಾಂಗಣದಲ್ಲಿ ಅಶೋಕ ಜನಮನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂಮಿಕ್ಕಿ ಬಂಧುಗಳು ಸೇರುವ ಕಾರಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಕಾರಣ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಜನಸಂದಣಿ ಹೆಚ್ಚಾದಾಗ ಯಾರಿಗೂ ತೊಂದರೆಯಾಗದಂತೆ ಸ್ವಯಂ ಸೇವಕರು ನೋಡಿಕೊಳ್ಳಬೇಕು. ಬಂದ ಪ್ರತೀಯೊಬ್ಬರೂ ಊಟ ಮಾಡಬೇಕು, ದೋಸೆ ಸೇವಿಸಬೇಕು ಇದನ್ನು ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬರುವ ವೃದ್ದರು, ಗರ್ಭಿಣಿಯರು, ಸಣ್ಣ ಮಕ್ಕಳ ತಾಯಂದಿರು, ಮಕ್ಕಳು ಜನಸಂದಣಿಯ ನಡುವೆ ಸಿಲುಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ವಿನಂತಿಸಿದರು.
ಶಾಸಕರ ಸೂಚನೆಯಂತೆ ಪೂರ್ಣ ವ್ಯವಸ್ಥೆ: ಸುದೇಶ್ ಶೆಟ್ಟಿ
ಅಶೋಕ ಜನಮನ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂಮಿಕ್ಕಿ ಜನ ಸೇರುವ ನಿರೀಕ್ಣೆ ಇರುವ ಕಾರಣ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗುತ್ತಿದೆ. ಬರುವ ಪ್ರತೀಯೊಬ್ಬರನ್ನೂ ಸಾವಿರಕ್ಕೂ ಮಿಕ್ಕಿ ಸ್ವಯಂ ಸೇವಕರೂ ಕಣ್ಗಾವಲಿಗಳಾಗಲಿದ್ದಾರೆ. ಸಮರೋಪಾದಿಯಲ್ಲಿ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಸೇರುವಂತೆ ನಾವು ಗ್ರಾಮಗಳಿಗೆ ತೆರಳಿ ಆಹ್ವಾನವನ್ನಹ ನೀಡುತ್ತಿದ್ದೇವೆ. ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮನವಿ ಮಾಡಿದರು.
ಸಭೆಯಲ್ಲಿ ಡಾ. ರಾಜಾರಾಂ ಕೆ ಬಿ, ಯು ಟಿ ತೌಸೀಫ್,ಜಯಪ್ರಕಾಶ್ ಬದಿನಾರ್,ನಿಹಾಲ್ ಪಿ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಪೂರ್ಣೇಶ್ ಭಂಡಾರಿ,ಶಿವನಾಥ ರೈ ಮೇಗಿನಗುತ್ತು,ದಯಾನಂದ ರೈ ಕೊರ್ಮಂಡ,ರಾಜೇಂದ್ರ ರೈ ಪುಣಚ, ಶಿವಪ್ರಸಾದ್ ಕೋಡಿಂಬಾಡಿ, ರಿತೇಶ್ ಶೆಟ್ಟಿ ಮಂಗಳೂರು,ಚಂದ್ರ ಶೇಖರ ಕಲ್ಲಗುಡ್ಡೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು,ಗಿರೀಶ್ ರೈ ಸಂಟ್ಯಾರ್,ಅನಿಮಿನೆಜಸ್, ನೆಬಿಸಾ ಬಪ್ಪಳಿಗೆ, ಪೂರ್ಣಿಮಾ ಸಂಪ್ಯ, ಸಾಹಿರಾ ಬನ್ನೂರು, ಬದ್ರು ಪರ್ಪುಂಜ,ಧರಣಿ ಕೆಯ್ಯೂರು,ಶೌಕತ್ ಕೆಮ್ಮಾರ, ಹಕೀಂ ಬೊಳುವಾರು, ರವೀಂದ್ರ ರೈ,ರಾಜಣ್ಣ, ನವೀನ್ ರೈ ಬನ್ನೂರು, ನೆಕ್ಕಿಲು,ಜಗನ್ನಾಥ ಶೆಟ್ಟಿ ನಡುಮನೆ ಗುತ್ತು, ಮತ್ತಿತರರು ಇದ್ದರು.
ಯೋಗೀಶ್ ಸಾಮಾನಿ ಸ್ವಾಗತಿಸಿದರು. ಕಚೇರಿ ಸಿಬಂದಿ ವಿನೋದ್ ಶೆಟ್ಟಿ ಕೊಳ್ತಿಗೆ, ಲಿಂಗಪ್ಪ ಕೊಡಿಪ್ಪಾಡಿ,ಪ್ರವೀಣ್, ರಚನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.