ಮಂಗಳೂರು: ಆತ ರೇಪ್ ಕೇಸ್‌ವೊಂದರಲ್ಲಿ ತಾಗ್ಲಾಕೊಂಡಿದ್ದವ. ಜೈಲಿಂದ ಹೊರ ಬಂದ್ಮೇಲೆ ಬುದ್ದಿ ಬದಲಾಗಿರ್ಲಿಲ್ಲ. ಈತನ ಪ್ರೀತಿಯ ನಾಟಕಕ್ಕೆ ಮರುಳಾದ ಹೆಣ್ಮಗಳು, ಕಾಮಾಂದರ ಕೈಯಿಂದ ಗ್ರೇಟ್ ಎಸ್ಕೇಪ್ ಆಗಿದ್ದಾಳೆ.
ಪ್ರೀತಿ ಅನ್ನೋ ಎರಡಕ್ಷರ ಏನೆಲ್ಲಾ ಮಾಡುತ್ತೆ ನೋಡಿ, ಜೀವಕ್ಕೆ ಜೀವ ಅಂತಾ ಪ್ರೀತಿ ಮಾಡೋರು ಮಧ್ಯೆ ಲವ್ ಹೆಸ್ರಲ್ಲಿ ಕಾಮದಾಟ ಆಡೋ ಇಂಥಾ ಖದೀಮರೂ ಇರ್ತಾರೆ ನೋಡಿ. ಚಿನ್ನ, ರನ್ನ ಅಂತಾ ಸುತ್ತಾಡೋರು, ತಮ್ಮ ತೆವಲು ತೀರಿದ್ಮೇಲೆ ಕೈ ಕೊಟ್ಟು ಎಸ್ಕೇಪ್ ಆಗ್ತಾರೆ. ಮಂಗಳೂರಲ್ಲಿ ಅಪ್ರಾಪ್ತೆಯೊಬ್ಬಳನ್ನ ಪ್ರೀತಿ ಹೆಸರಲ್ಲಿ ಬುಟ್ಟಿಗೆ ಕೆಡವಿಕೊಂಡವ, ಅಟ್ಟಹಾಸ ಮೆರೆಯೋದಕ್ಕೆ ಹೊಂಚು ಹಾಕಿದ್ದ. ಮನೆಯಲ್ಲಿ ಯಾರೂ ಇಲ್ಲ ಬಾ ಅಂತಾ ಕರೆಸಿಕೊಂಡು ಗ್ಯಾಂಗ್‌ರೇಪ್‌ಗೆ ಪ್ಲ್ಯಾನ್ ಮಾಡಿದವ್ರು ಖಾಕಿ ಕೈಯಲ್ಲಿ ಲಾಕ್ ಆಗಿದ್ದಾರೆ.
ಇವರ ಅಂದ ಚೆಂದ ನೋಡ್ತಿದ್ರೇನೇ ನಡುಕ ಬರೋ ಹಾಗಿದೆ. ಒಬ್ಬೊಬ್ರದ್ದೂ ಒಂದೊಂದು ವೇಷ. ಹಾದಿ ಬೀದಿಲಿ ತಿರುಗೋರು ಕೂಡಾ ಇವ್ರಿಗಿಂತ ಚೆನ್ನಾಗಿರ್ತಾರೆ. ಇಂತಹವರ ಮುಸುಡಿಗೆ ಆ ಹೆಣ್ಮಗಳು ಅದೇಗೆ ಬಿದ್ದಿದ್ಲೋ ಏನೋ? ಈತನ ಹೆಸರು ಮಹೇಶ ಅಂತಾ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ನಿಡ್ಡೋಡಿ ನಿವಾಸಿ. ಹದಿಹರೆಯದ ಹೆಣ್ಮಗಳನ್ನ ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದವ, ಪ್ರೀತಿ ಪ್ರೇಮ ಅಂತೆಲ್ಲಾ ಮಂಕುಬೂದಿ ಎರಚಿದ್ದ. ಕೊನೆಗೆ ಪ್ರೀತಿ ಹೆಸರಲ್ಲಿ ಕಾಮದ ಕಣ್ಣಿಟ್ಟವ ತನ್ನ ಸ್ನೇಹಿತರನ್ನ ಸೇರಿಸ್ಕೊಂಡು ಹುರಿದು ಮುಕ್ಕೋದಕ್ಕೆ ನೋಡಿದ್ದ. ಮನೆಯಲ್ಲಿ ಯಾರಿಲ್ಲ ಬಾ ಅಂತಾ ಅಪ್ರಾಪ್ತೆಯನ್ನ ಕರೆಸಿಕೊಂಡವ ಅಟ್ಟಹಾಸ ಮೆರೆಯೋದಕ್ಕೆ ಹೊಂಚು ಹಾಕಿದ್ದ. ಆದರೆ, ಕೊನೆಗೆ ಆಗಿದ್ದೇ ಬೇರೆ.
ಇವರ ವಿಷಯ ಪೊಲೀಸರಿಗೆ ಅದೇಗೆ ಗೊತ್ತಾಗಿತ್ತೋ ಏನೋ ಮೂಡಬಿದರೆ ಪೊಲೀಸರು ಕಾಮುಕರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ರಾಪ್ತೆಯನ್ನ ಹುರಿದು ಮುಕ್ಕೋದಕ್ಕೆ ನೋಡಿದವರು ನಿಂತಲ್ಲೇ ನಡುಗಿ ಹೋಗಿದ್ದಾರೆ. ಈ ಮಹೇಶ ಅಂತಿಂತಾ ಕಿರಾತಕನಲ್ಲ. ಈ ಹಿಂದೆಯೂ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ನಂತೆ. ಹೀಗಾಗಿ ಆರೋಪಿಗಳನ್ನ ಎತ್ತಾಕೊಂಡು ಹೋಗಿರೋ ಪೊಲೀಸರು ಪೋಕ್ಸೋ ಪ್ರಕರಣ ಫಿಟ್ ಮಾಡಿದ್ದಾರೆ. ಒಟ್ನಲ್ಲಿ ಪೊಲೀಸರ ಸಮಯ ಪ್ರಜ್ಞೆಯೋ ಅಥವಾ ಹೆಣ್ಮಗಳ ಅದೃಷ್ಟವೋ ಗೊತ್ತಿಲ್ಲ ಕಾಮ ಕಿರಾತಕರ ಕೈಯಿಂದ ಗ್ರೇಟ್ ಬಚಾವ್ ಆಗಿದ್ದಾಳೆ.