ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಜಾನುವಾರಗಳಲ್ಲಿ ಒಂದು ಜಾನುವಾರು ಸತ್ತಿತ್ತು , ಸ್ಥಳಕ್ಕೆ ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಈ ವಿಷಯವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿ ಮತ್ತು ಎತ್ತುಗಳನ್ನು ವಾಹನದಿಂದ ಇಳಿಸಲು ಅನುಮತಿ ಕೋರಿದ್ದು (ಇದನ್ನು ವಿಡಿಯೊದಲ್ಲಿಯೇ ನೋಡಬಹುದು). ಜಾನುವಾರಗಳ ಇನ್ನಷ್ಟು ಸಾವು ತಪ್ಪಿಸಲು ಪೊಲೀಸರು ಅದಕ್ಕೆ ಒಪ್ಪಿದರು. ನಂತರ ಹತ್ತಿರದ ಮನೆಯಿಂದ ಕತ್ತಿಯನ್ನು ತರಿಸಿಕೊಂಡು ಕಟ್ಟಿ ಹಾಕಿದ್ದ ಹಗ್ಗಗಳನ್ನು ಕತ್ತರಿಸಿರುವುದಾಗಿದೆ.
ಅರುಣ್‌ಕುಮಾರ್ ಪುತ್ತಿಲ ಕೈಯಲ್ಲಿದ್ದ ಕತ್ತಿಯನ್ನು ಸಮೀಪದ ಮನೆಯೊಂದರಿಂದ ತರಲಾಗಿತ್ತು. ಅದು ಘಟನೆ ನಡೆದ ಸ್ಥಳದ ಎದುರಿನ ಮುಸ್ಲಿಂ ಕುಟುಂಬದ ಮನೆಯಿಂದ ತರಲಾಗಿದ್ದು, ಜಾನುವಾರುಗಳನ್ನು ರಕ್ಷಿಸಲು ಸಹಾಯವಾಗಲೆಂದು ಅವರು ತಮ್ಮ ಮನೆಯಿಂದ ಅದನ್ನು ನೀಡಿದ್ದರು.
ಪೊಲೀಸರು ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಸ್ಥಳೀಯರು ಮತ್ತು ಇತರರ ಸಹಾಯವನ್ನು ಪಡೆಯುತ್ತಾರೆ. ಉದಾಹರಣೆಗೆ ರೋಗಿಗಳನ್ನು ಸ್ಥಳಾಂತರಿಸುವುದು, ಶವಗಳನ್ನು ಸಾಗಿಸುವುದು, ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸುವುದು, ಎತ್ತುಗಳನ್ನು ಇಳಿಸುವುದು ಇತ್ಯಾದಿ.
ಯಾರು ಅನಧಿಕೃತ ಕೃತ್ಯ ಮಾಡುತ್ತಾರೋ, ಅವರನ್ನು ಕೇವಲ ಅಪರಾಧಿಗಳೆಂದು ಪರಿಗಣಿಸಬೇಕು. ಈ ವರೆಗೆ ದಾಖಲಾಗಿರುವ ಪ್ರಕರಣಗಳ ವಿಶ್ಲೇಷಣೆಯಿಂದ ನೋಡಿದರೆ, ಜಾನುವಾರು ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ವಿವಿಧ ಧರ್ಮದವರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಆದ್ದರಿಂದ, ಯಾವುದೇ ಸಂಸ್ಥೆ ಅಥವಾ ಸಂಘಟನೆಯು ಆರೋಪಿಯು ಬೇರೆ ಧರ್ಮದವರಾದ್ದರಿಂದ ಮಾತ್ರ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದರೆ, ಅಥವಾ ತಮ್ಮ ಧರ್ಮದವರಾದ್ದರಿಂದ ಅದನ್ನು ಮುಚ್ಚಿಡುತ್ತಿದ್ದರೆ, ಜನರು ಅವರ ಉದ್ದೇಶಗಳನ್ನು ಪ್ರಶ್ನಿಸಬೇಕು, ಅವರ ಅಜೆಂಡಾಕ್ಕೆ ಬೆಂಬಲ ನೀಡಬಾರದು ಎಂದು ವಿನಂತಿಸಲಾಗಿದೆ.
ಈ ಸಂಬಂಧ ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ