ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧ ವರ್ಷದ ಹಿನ್ನೆಲೆಯಲ್ಲಿ ಸಂಜೆ ಪುತ್ತೂರಿನಲ್ಲಿ ಆರೆಸ್ಸೆಸ್ ಗಣವೇಷಧಾರಿಗಳಿಂದ ಬೃಹತ್ ಪಥಸಂಚಲನ ನಡೆಯಿತು.
ಪಥಸಂಚಲನದ ಸಂದರ್ಭ ಮಾತೆಯರು ಪುಷ್ಪಾರ್ಚನೆಗೈದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಹೊರಟ ಪಥಸಂಚಲನ ದರ್ಬೆ ಜಂಕ್ಷನ್ ಬಳಿ ಸಮಾಪ್ತಿಗೊಂಡಿತು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಹಿಂದೂ ಮುಂದಾಳುಗಳಾದ ಅಚ್ಚುತ ನಾಯಕ್, ವಾಮನ ಪೈ, ರವೀಂದ್ರ, ಶಿವ ಕುಮಾರ್ ಕಲ್ಲಿಮಾರ್, ರಾಜೇಶ್ ಬನ್ನುರು, ಚಂದ್ರಶೇಖರ ಬಪ್ಪಳಿಗೆ, ಪ್ರಸನ್ನ ಮಾರ್ತ, ಡಾ. ಕೃಷ್ಣಪ್ರಸನ್ನ, ಶಶಿಧರ ನಾಯಕ್, ನಾಗೇಂದ್ರ ಬಾಳಿಗಾ ಮತ್ತಿತರ ಪ್ರಮುಖರು ಸುಮಾರು 750ಕಿಂತಲೂ ಮಂದಿ ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.























