ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಸುರೇಶ(ಚೋಯಿ ಭರಣ್ಯ) ರವರು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಆರು ತಿಂಗಳಿನಿಂದ ಎದ್ದು ನಡೆದಾಡದ ಪರಿಸ್ಥಿತಿ ಯಲ್ಲಿದ್ದು ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ವಾಗಿರುವ ಇವರ ಕುಟುಂಬಕ್ಕೆ ಪುತ್ತಿಲಪರಿವಾರ ಸೇವಾ ಟ್ರಸ್ಟ್(ರಿ) ಪಾಣಾಜೆ ಗ್ರಾಮ ಸಮಿತಿಯ ವತಿಯಿಂದ ಸಂಗ್ರಹಿಸಿದ 10,000/- ರೂ ಸಹಾಯಧನವನ್ನು ಪುತ್ತೂರು ಪುತ್ತಿಲಪರಿವಾರ ಸೇವಾ ಟ್ರಸ್ಟ್(ರಿ) ನ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮಾರ್ಗದರ್ಶಕರಾದ ರಾಕೇಶ್ ರೈ ಕಡಮಾಜೆ, ಪುಷ್ಪರಾಜ ರೈ ಕೋಟೆ, ಪುತ್ತಿಲ ಪರಿವಾರದ ಸೇವಾ ಟ್ರಸ್ಟ್ (ರಿ) ಪುತ್ತೂರು ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಪಾಣಾಜೆ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕಿನ್ ರಾಜ್ ಕೊಂದಲ್ಕಾನ, ಕಾರ್ಯಕರ್ತರಾದ ವಸಂತ ಭರಣ್ಯ, ಪ್ರದೀಪ್ ಪಾಣಾಜೆ,ಸಂದೀಪ್ ಕೆ,ವಿನಯ ಭರಣ್ಯ, ಜಯಪ್ರಸಾದ್ ರೈ ಕೋಟೆ,ಗುರುರಾಜ್ ಭರಣ್ಯ, ನಾರಾಯಣ ಭರಣ್ಯ ಉಪಸ್ಥಿತರಿದ್ದರು.























