ನೆಲ್ಯಾಡಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಪಿಎಂ ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿಯಲ್ಲಿ ಭಾವಪೂರ್ಣವಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷರಾದ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ದಿನಕರ್ ಕೆ ಎಚ್, ಮುಖ್ಯಗುರುಗಳಾದ ವೀಣಾ ಮಸ್ಕರನ್ನಾಸ್, ಮೌಲ್ಯಮಾಪಕರು, ಹಾಗೂ ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜಿಯನ್ ನಿಕಟ ಪೂರ್ವ ಅಧ್ಯಕ್ಷರೂ ಆದ ಸೀನಿಯರ್ ಪಿಪಿಎಫ್ ಶೀನಪ್ಪ ಎಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಡಬ ತಾಲೂಕು ಇದರ ಅಧ್ಯಕ್ಷರಾದ ಸೀನಿಯರ್ ವಿಮಲ್ ಕುಮಾರ್, ಜ್ಞಾನೋದಯ ಬೆಥನಿ ಇಂಗ್ಲೀಷ್ ಮೀಡಿಯಂ ಮುಖ್ಯ ಗುರುಗಳಾದ ಸೀನಿಯರ್ ಜೋರ್ಜ್ ಕೆ ತೋಮಸ್ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳು ಮಾತನಾಡಿ, ಕನ್ನಡದ ಗೌರವವನ್ನು ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಎಂದು ಒತ್ತಿ ಹೇಳಿದರು. ಅವರು ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಹಾಗೂ ನಿಷ್ಠೆಯನ್ನು ಮೆಚ್ಚಿ ಅಭಿನಂದಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕರುಗಳು ಹಾಗೂ ಸೀನಿಯರ್ ಮೇರಿ ಜೋನ್, ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದ್ದರು ಶಿಕ್ಷಕಿ ಶ್ರೀಮತಿ ಪ್ರವೀಣ ಸ್ಟಾಗತಿಸಿ ರತಿಲತಾ ವಂದಿಸಿದರು.























