ಪುತ್ತೂರು: ಕೊಡಿಪ್ಪಾಡಿ ಗ್ರಾಮವನ್ನು ಉಪ್ಪಿನಂಗಡಿ ಹೋಬಳಿಯಿಂದ ಪುತ್ತೂರು ಹೋಬಳಿಗೆ ಶಿಫ್ಟ್ ಮಾಡಲಾಗಿದ್ದು ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಶಾಸಕರಾದ ಅಶೋಕ್ ರೈ ಈಡೇರಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ಕೊಡಿಪ್ಪಾಡಿ ಗ್ರಾಪಂ ಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಅಲ್ಲಿ ಸೇರಿದ್ದ ಸಾರ್ವಜನಿಕರು ಕೊಡಿಪ್ಪಾಡಿ ಗ್ರಾಮ ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯಲ್ಲಿದ್ದು ನಮಗೆ ಕಂದಾಯ ಇಲಖೆಯ ಯಾವುದೇ ಕೆಲಸ ಕಾರ್ಯಕ್ಕೂ ದೂರದ ಉಪ್ಪಿನಂಘಡಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ನಮ್ಮ ಗ್ರಾಮವನ್ನು ಪುತ್ತೂರು ಹೋಬಳಿಗೆ ಬದಲಾಯಿಸಿ ಎಂದು ಕಳೇದ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಇಲಾಖೆಗೆ ಮನವಿ ಮಾಡುತ್ತಿದ್ದೇವೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕ ಅಶೋಕ್ ರೈ ಅವರಲ್ಲಿ ವಿನಂತಿಸಿದ್ದರು. ಜನರ ಮನವಿಗೆ ಸ್ಪಂದಿಸಿದ ಶಾಸಕರು ತಕ್ಷಣ ಈ ಕಾರ್ಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತೆ ವಿನಂತಿಸಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವರು ದ ಕ ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ.
ಕೊಡಿಪ್ಪಾಡಿ ಗ್ರಾಮ ಪುತ್ತೂರು ಹೋಬಳಿಗೆ ಹತ್ತಿರವಿದೆ, ಆದರೆ ಬೌಗೋಳಿಕವಾಗಿ ಉಪ್ಪಿನಂಗಡಿ ಹೋಬಳಿಗೆ ಸೇರಿತ್ತು. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿತ್ತು. ಕಳೆದ ಕೆಲವು ದಿನಗಳ ಮಹಿಂದೆ ಗ್ರಾಮಸ್ಥರು ನನ್ನಲ್ಲಿ ಮನವಿ ಮಾಡಿ ಸಂಕಷ್ಟ ತೋಡಿಕೊಂಡಿದ್ದರು. ಈ ವಿಚಾರದ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತಂದು ಗ್ರಾಮವನ್ನು ಪುತ್ತೂರು ಹೋಬಳಿಗೆ ಸೇರಿಸುವಲ್ಲಿ ಸರಕಾರದಿಂದ ಅನುಮೋದನೆ ದೊರಕಿದೆ. ಇದು ತುಂಬಾ ಪ್ರಯೋಜನವನ್ನು ಒದಗಿಸಲಿದೆ ಅಶೋಕ್ ರೈ, ಶಾಸಕರು ಪುತ್ತೂರು






















